Thursday, August 13, 2026

BDA Apartments

Home Front Page ಮೈಸೂರಿನ ಸುತ್ತೂರು ಮಠಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ: ಶ್ರೀಗಳ ಜತೆ ಸುದೀರ್ಘ ಸಮಾಲೋಚನೆ…

ಮೈಸೂರಿನ ಸುತ್ತೂರು ಮಠಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ: ಶ್ರೀಗಳ ಜತೆ ಸುದೀರ್ಘ ಸಮಾಲೋಚನೆ…

ಮೈಸೂರು,ಜೂ,24,2019(www.justkannada.in):  ಮೈಸೂರಿನ ಸುತ್ತೂರು ಮಠಕ್ಕೆ ಉಪಮುಖ್ಯಮಂತ್ರಿ  ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ಸುತ್ತೂರು ಶ್ರೀಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು.

ಸುತ್ತೂರಿನಲ್ಲಿ ನೂತನ ಸೈನ್ಸ್ ಸಿಟಿ ಪ್ರಸ್ತಾವನೆಗೊಂಡಿರುವ ಸ್ಥಳ ಪರಿಶೀಲನೆಗಾಗಿ ಡಿಸಿಎಂ ಪರಮೇಶ್ವರ್ ಭೇಟಿ ನೀಡಿದ್ದರು. ಸುತ್ತೂರು ಮಠಕ್ಕೆ ಭೇಟಿ ನೀಡಿದ ಡಾ.ಜಿ. ಪರಮೇಶ್ವರ್ ಅವರಿಗೆ ಪೊಲೀಸ್ ಇಲಾಖೆಯಿಂದ ಗಾಡ್ ಆಫ್ ಆನರ್ ಮೂಲಕ ಸ್ವಾಗತ. ಕೋರಲಾಯಿತು. ಬಳಿಕ ಡಾ.ಜಿ. ಪರಮೇಶ್ವರ್ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದಾದ ನಂತರ ಪೋಲಿಸ್ ಸಿಬ್ಬಂದಿ ಹಾಗೂ ಅಧಿಕಾರಿಗಳೊಡನೆ ಮಠದಲ್ಲೇ ಉಪಹಾರ ಸೇವಿಸಿದರು. ಆ ಬಳಿಕ ಸುತ್ತೂರು ಶ್ರೀಗಳೋಡನೇ ಡಾ.ಜಿ.ಪರಮೇಶ್ವರ್ ಸುದೀರ್ಘ ಸಮಾಲೋಚನೆ ನಡೆಸಿದರು.

Key words: DCM Parameshwar- visits –suttur Math -Mysore.