ಬಿ.ಎಸ್ ಯಡಿಯೂರಪ್ಪ ಕನಸುಗಳಿಗೆ ಉತ್ತರ ಕೊಡೋಕೆ ಆಗಲ್ಲ-ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್…

ಮೈಸೂರು,ಜೂ,24,2019(www.justkannada.in): ಬಿಎಸ್ ಯಡಿಯೂರಪ್ಪ ಕನಸುಗಳಿಗೆ ಉತ್ತರ ಕೊಡೋಕೆ ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ ಬಹಳಷ್ಟು ದಿನದಿಂದ ಸರಕಾರ ಬೀಳುವ ಮಾತಾಡ್ತಾ ಇದ್ದಾರೆ. ಆದರೆ ಯಡಿಯೂರಪ್ಪ ಹೇಳಿದ್ದು ಯಾವತ್ತೂ ನಿಜವಾಗಿಲ್ಲ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲ್ಲ ಎಂದರು.

ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಕ್ಷ ಸಂಘಟನೆಗಾಗಿ ಈಗ ಕೆಪಿಸಿಸಿಯಲ್ಲಿ ರೀಷಫಲ್ ಮಾಡಲಾಗಿದೆ.  ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ. ಯುವಕರಿಗೆ ಅವಕಾಶ ಕೊಡಲು ಈ ರೀತಿ ತೀರ್ಮಾನ ತೆಗೆದುಕೊಳ್ಳಲಲಾಗಿದೆ. ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

Key words: not answer -BS Yeddyurappa’s- dreams-Former CM -Siddaramaiah