Sunday, August 9, 2026

BDA Apartments

Home Cinema ಕಮಲ್ ಹಾಸನ್ ಪರ ಮೃದು ಧೋರಣೆ ಇಲ್ಲ: ಕ್ಷಮೆ ಕೇಳುವ ವಿಶ್ವಾಸವಿದೆ- ಡಿಸಿಎಂ ಡಿಕೆ ಶಿವಕುಮಾರ್

ಕಮಲ್ ಹಾಸನ್ ಪರ ಮೃದು ಧೋರಣೆ ಇಲ್ಲ: ಕ್ಷಮೆ ಕೇಳುವ ವಿಶ್ವಾಸವಿದೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,3,2025 (www.justkannada.in): ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ  ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕಮಲ್ ಹಾಸನ್ ಪರ ಮೃದು ಧೋರಣೆ ಇಲ್ಲ. ಏನಾದರೂ ಹೆಚ್ಚು ಕಮ್ಮಿಯಾದ್ರೆ ಯಾರು ಹೊಣೆ . ಹೊಸೂರಿಗೆ ನಿತ್ಯ 50 ಸಾವಿರ ಜನ ಹೋಗ್ತಾರೆ ಹೊಸೂರಿನಿಂದಲೂ ಸಾವಿರಾರು ಜನ ಬರುತ್ತಾರೆ.  ನಟ ಕಮಲ್ ಹಾಸನ್ ತಪ್ಪು ಮಾಡಿದ್ದಾರೆ. ಕ್ಷಮೆ ಕೇಳುತ್ತಾರೆ ಎಂದರು.

ಕಮಲ್ ಹಾಸನ್  ಕ್ಷಮೆ ಕೇಳುತ್ತಾರೆ ಅನ್ನೋ ವಿಶ್ವಾಸವಿದೆ. ಕಮಲ್ ಹಾಸನ್ ಕೋರ್ಟ್ ಗೆ ಹೋಗಿದ್ದಾರೆ ಕ್ಷಮೆಯಾಚನೆಗೆ ಕೋರ್ಟ್ ಸೂಚನೆ ನೀಡಿದೆ. ವಿವಾದ ಬೇರೆ ರೂಪಕ್ಕೆ ತಿರುಗಿದರೇ  ಯಾರು ಹೊಣೆ. ನಮ್ಮವರೂ ಲಿಮಿಟ್ ನಲ್ಲಿ ಇರಬೇಕು.  ನಾವು ಸೂಜಿ ಬಿಜೆಪಿ ಕತ್ತರಿ ನಾವು ಹೊಲೆಯುವ ಕೆಲಸ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.vtu

Key words: Actor Kamal Hassan, Kannada, DCM DK Shivakumar