Wednesday, August 12, 2026

BDA Apartments

Home Front Page ಸಾದಿಕ್ ಪೈಲ್ವಾನ್ ಹುಟ್ಟು ಕಾಂಗ್ರೆಸ್ಸಿಗ: ಕಣದಿಂದ ಹಿಂದೆ ಸರಿದಿದ್ದಾರೆ-ಡಿಸಿಎಂ ಡಿಕೆ ಶಿವಕುಮಾರ್

ಸಾದಿಕ್ ಪೈಲ್ವಾನ್ ಹುಟ್ಟು ಕಾಂಗ್ರೆಸ್ಸಿಗ: ಕಣದಿಂದ ಹಿಂದೆ ಸರಿದಿದ್ದಾರೆ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,27,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ದ ಬಂಡಾಯವೆದ್ದಿದ್ದ  ಸಾದಿಕ್ ಪೈಲ್ವಾನ್ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್,  ಸಾಧಿಕ್ ಪೈಲ್ವಾನ್ ಮನವೊಲಿಸಲು ಸಲೀಂ ಅಹ್ಮದ್ ಮತ್ತು  ರಿಜ್ವಾನ್ ಅರ್ಷದ್ ಗೆ ಜವಾಬ್ದಾರಿ ನೀಡಿದ್ದವು. ಇನ್ನು ಕೆಲವರಿಗೆ ಜವಾಬ್ದಾರಿ ವಹಿಸಿದ್ದವು.  ಕೆಲವರು ಕೇರಳ ಹೋಗುತ್ತಿವಿ ಅಂದರು.  ನಾಮಪತ್ರ ಹಿಂಪಡೆಯಲು ಸಾಧ‍್ಯವಾಗಲಿಲ್ಲ ಸಾದಿಕ್ ಪೈಲ್ವಾನ್ ಹುಟ್ಟು ಕಾಂಗ್ರೆಸ್ಸಿಗ. ಕಾಂಗ್ರೆಸ್ ಗೆ ತೊಂದರೆ ಆಗಬಾರದೆಂದು ಕಣದಿಂದ ಹಿಂದೆ ಸರಿಸಿದ್ದಾರೆ ಎಂದರು.

ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸಾದಿಕ್ ಪೈಲ್ವಾನ್  ಅಣ್ಣತಮ್ಮಂದಿರ ರೀತಿ ಇದ್ದವರು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುತ್ತೇವೆ ದೇಶಕ್ಕೆ ಒಳ್ಳೆಯ ಸಂದೇಶ ಹೋಗಬೇಕೆಂದು ಹೇಳಿದ್ದಾರೆ.  ಸಾದಿಕ್ ಗೆ ಅಭಿನಂದಿಸುವೆ.  ಅವರ ಎದೆಯಲ್ಲಿ ಪಕ್ಷದ ನಿಷ್ಠೆ ಎದ್ದು ಕಾಣುತ್ತಿದೆ. ಸಾದಿಕ್ ಮನವೊಲಿಕೆಗೆ ಮುಖಂಡರು ಹಗಲು ರಾತ್ರಿ ಕಷ್ಟಪಟ್ಟಿದ್ದಾರೆ ಎಂದು ತಿಳಿಸಿದರು.

Key words: Sadiq Pailwan, withdrawn, contest, DCM, DK Shivakumar