Sunday, August 9, 2026

BDA Apartments

Home Front Page ಮೆಟ್ರೋ ದರ ಹೆಚ್ಚಳ: ಇಂದು ಅಥವಾ ನಾಳೆ ಚೇರ್ಮನ್ ಜೊತೆ ಮಾತುಕತೆ- ಡಿಸಿಎಂ ಡಿಕೆ ಶಿವಕುಮಾರ್

ಮೆಟ್ರೋ ದರ ಹೆಚ್ಚಳ: ಇಂದು ಅಥವಾ ನಾಳೆ ಚೇರ್ಮನ್ ಜೊತೆ ಮಾತುಕತೆ- ಡಿಸಿಎಂ ಡಿಕೆ ಶಿವಕುಮಾರ್

ಮಂಗಳೂರು,ಫೆಬ್ರವರಿ,7,2026 (www.justkannada.in) : ಮೆಟ್ರೋ ದರ ಶೇ5 ರಷ್ಟು ಹೆಚ್ಚಳ ಸಂಬಂಧ ಇಂದು ಅಥವಾ ನಾಳೆ ಮೆಟ್ರೋ ಚೇರ್ಮನ್ ಜೊತೆ ಮಾತನಾಡುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ದರ ಹೆಚ್ಚಳ ವಿಚಾರವಾಗಿ ನಮ್ಮನ್ನು ಯಾರು ಸಂಪರ್ಕಿಸಿಲ್ಲ. ಮೆಟ್ರೋ ಚೇರ್ಮನ್ ಆಗಿ ಕೇಂದ್ರ ಸರ್ಕಾರದವರು ಇದ್ದಾರೆ ಇಂದು ಅಥವಾ ನಾಳೆ ಮೆಟ್ರೋ ಚೇರ್ಮನ್ ಜೊತೆ ಮಾತನಾಡುವೆ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಮಾಡಲ್ಲ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ವಿಚಾರವಾಗಿ ಮಾತನಾಡುತ್ತೇನೆ ಎಂದರು.

ಪರಮೇಶ್ವರ್ ಸಿಎಂ ಆಗಬೇಕೆಂದು ಬೆಂಬಲಿಗರು  ಹೇಳಿಕೆ ವಿಚಾರ, ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ ತಪ್ಪೇನಿದೆ ಎಂದರು.   ಬಜೆಟ್ ಬಳಿಕ ಸಿಎಂ ಆಗುತ್ತೀರಾ? ಎಂಬ ಪ್ರಶ್ನೆಗೆ  ಎಲ್ಲದಕ್ಕೂ ಸಮಯವೇ ಉತ್ತರ ನೀಡಲಿದೆ ಎಂದರು.

Key words: Metro fare, hike, Talks, chairman, DCM, DK Shivakumar