ನಿಲ್ಲದ ದಶಪಥ ಹೆದ್ದಾರಿ ಕ್ರೆಡಿಟ್ ವಾರ್: ಸಂಸದ ಪ್ರತಾಪ್ ಸಿಂಹ ವಿರುದ್ದ ಸಚಿವ ಹೆಚ್. ಸಿ ಮಹದೇವಪ್ಪ ವಾಗ್ದಾಳಿ.

ಮೈಸೂರು,ಡಿಸೆಂಬರ್,28,2023(www.justkannada.in): ದಶಪಥ ಹೆದ್ದಾರಿ ಕ್ರೆಡಿಟ್ ವಾರ್ ಮತ್ತೆ ಮುಂದುವರೆದಿದ್ದು, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್‌ಸಿ.ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಪ್ರತಾಪ್ ಸಿಂಹ ಸುಮ್ಮನೆ ಬುರುಡೆ ಬಿಡ್ತಾನೆ. ಪ್ರತಾಪ್ ಸಿಂಹ ಏನು ಮೇಸ್ತ್ರಿ ಏನ್ರಿ? ಸಿದ್ದರಾಮಯ್ಯ ಪ್ರತಾಪ್ ಸಿಂಹ ಇಕ್ವಲ್ ಲೀಡರಾ..? ಎಂದು ಪ್ರಶ್ನಿಸಿದರು.

ರಾಜ್ಯ ಹೆದ್ದಾರಿ ಆಗಿದ್ದಾಗ ಪ್ರತಾಪ್ ಸಿಂಹ ಸಂಸದ ಆಗಿರಲಿಲ್ಲ. ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಘೋಷಣೆ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಘೋಷಣೆ ಆಗಿದ್ದಾಗ ಪ್ರತಾಪ್ ಸಿಂಹ ಸಂಸದನೇ ಆಗಿರಲಿಲ್ವಲ್ಲ. ರಾಷ್ಟ್ರೀಯ ಹೆದ್ದಾರಿ ಘೋಷಣೆ ಆದ ಮೇಲೆ ಅದನ್ನ ಮಾಡೊದು ಸರ್ಕಾರದ ಕೆಲಸ ಅಲ್ಲವಾ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇವರಿಗೆ ಇನ್ ಚಾರ್ಜ್ ಕೊಟ್ಟಿದ್ದರಾ..? ಡಿಪಿಆರ್ ಮಾಡಿಕೊಡು ಅಂತಾ ಕೇಳಿದ್ರಾ…?  ಸುಮ್ಮನೆ ಬುರುಡೆ ಬಿಡುವ ಕೆಲಸ ಮಾಡಬಾರದು. ಕೆಲಸ ಮಾಡಿದ್ರೆ ಖಂಡಿತ ಅಭಿನಂದನೆ ಸಲ್ಲಿಸುವೆ ಎಂದು ಹೆಚ್.ಸಿ ಮಹದೇವಪ್ಪ ಕಿಡಿಕಾರಿದರು.

ಒಂದು ಯೋಜನೆ ತಯಾರಾಗಲು ರಾಜ್ಯ ಸರ್ಕಾರಗಳು ಪ್ರಸ್ತಾಪ ಸಲ್ಲಿಸಿ ಹಲವು ಹಂತಗಳ ನಂತರ ಹೆದ್ದಾರಿ ಆಗುತ್ತೆ. ಆಗ ಇವರು  ಸಂಸದರೇ ಆಗಿರಲಿಲ್ಲ. ಸುಮ್ಮನೆ ಅವರ ಹೇಳಿಕೆಗಳಿಗೆ ಮೈಲೇಜ್ ಕೊಡಬಾರದು. ನೀರು ತುಂಬಿರೋದನ್ನ ನೋಡಲು ಇವರು ಯಾಕೆ ಹೋಗಿದ್ರು. ಫ್ಲಡ್ ಬಂದ್ರೆ ಎಲ್ಲರೂ ಹೋಗುತ್ತಾರೆ. ಹಾಗಂತ ನೀರಲ್ಲಿ ಬಿದ್ದು ನಾನೇ ಮರಗಳನ್ನ ಜನಗಳನ್ನ ರಕ್ಷಣೆ ಮಾಡಿದ್ದು ಅಂದ್ರೆ ಹೇಗೆ. ವಾಟಿಸ್ ದಿಸ್ ನಾನ್‌ಸೆನ್ಸ್ ಎಂದು ಹೆಚ್.ಸಿ ಮಹದೇವಪ್ಪ ಗುಡುಗಿದರು.

Key words: Dashpath Highway- Credit War- MP Pratap Simha- Minister -H. C Mahadevappa