Friday, September 11, 2026

BDA Apartments

Home Front Page ಕರೋನಾ ವೈರಸ್ ಭೀತಿ: ಮೈಸೂರಿನ ಅವಧೂತ ದತ್ತಪೀಠದ ಶುಕವನ, ವಿಶ್ವಂವಸ್ತು ಸಂಗ್ರಹಾಲಯ ಬಂದ್…

ಕರೋನಾ ವೈರಸ್ ಭೀತಿ: ಮೈಸೂರಿನ ಅವಧೂತ ದತ್ತಪೀಠದ ಶುಕವನ, ವಿಶ್ವಂವಸ್ತು ಸಂಗ್ರಹಾಲಯ ಬಂದ್…

ಮೈಸೂರು,ಮಾ,8,2020(www.justkannada.in): ಇಡೀ ವಿಶ್ವದಲ್ಲೇ ತಲ್ಲಣ ಮೂಡಿಸಿರುವ ಕರೋನಾ ವೈರಸ್  ಭೀತಿ ಹಿನ್ನೆಲೆ ಮೈಸೂರಿನ ಅವಧೂತ ದತ್ತಪೀಠ ಮಂಜಾಗೃತಾ ಕ್ರಮಗಳನ್ನ ಕೈಗೊಂಡಿದೆ.

ಕೊರೋನಾ ವೈರಸ್ ಭೀತಿಯಿಂದಾಗಿ ನಾಳೆಯಿಂದ ಅನಿರ್ದಿಷ್ಟಾವಧಿವರೆಗೆ ಅವಧೂತ ದತ್ತಪೀಠದ  ಶುಕವನ, ಕಿಷ್ಕಿಂಧ ಮೂಲಿಕಾ ಬೋನ್ಸಾಯಿ ಗಾರ್ಡನ್, ವಿಶ್ವಂ ವಸ್ತು ಸಂಗ್ರಹಾಲಯ ಬಂದ್ ಮಾಡಲಾಗಿದೆ.  ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಆಶ್ರಮದ ವೆಬ್‌ಸೈಟ್‌ ನಲ್ಲಿ ಕನ್ನಡ, ಇಂಗ್ಲಿಷ್, ತೆಲುಗು ಭಾಷೆಯಲ್ಲಿ ಪ್ರಕಟಣೆ ಮಾಡಲಾಗಿದೆ.

ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸೂಚನೆ ಮೇರೆಗೆ  ಬಂದ್ ಮಾಡಲಾಗಿದೆ. ಗಿಳಿವಿಂಡು, ಬೋನ್ಸಾಯ್ ಗಿಡಗಳನ್ನು ನೋಡಲು ಬಹುತೇಕರು ವಿದೇಶಿಗರು ಆಗಮಿಸುತ್ತಿದ್ದರು.  ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಬಂದ್ ಮಾಡಿ ಆಶ್ರಮ ಕ್ರಮ ಕೈಗೊಂಡಿದೆ.

Key words: Fear – corona virus- Mysore- avadhoota datthapeeta- Shukavana-bandh