Tuesday, October 13, 2026

Dasara Wishes

Happy Dasara
Home Front Page ದಸರಾ ಕ್ರೀಡಾಕೂಟ ಸಿ.ಎಂ ಕಪ್‌ -2026: ನೂತನ ದಾಖಲೆ ನಿರ್ಮಾಣ

ದಸರಾ ಕ್ರೀಡಾಕೂಟ ಸಿ.ಎಂ ಕಪ್‌ -2026: ನೂತನ ದಾಖಲೆ ನಿರ್ಮಾಣ

 

ಮೈಸೂರು,ಆಕ್ಟೋಬರ್‌,13,2026 (www.justkannada.in) ನಾಡ ಹಬ್ಬ ದಸರಾ ನಿಮಿತ್ಯವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಿನ್ನೆಯಿಂದ ಪ್ರಾರಂಭವಾದ ಅಥ್ಲೇಟಿಕ್ಸ್‌ ಕ್ರೀಡಾಕೂಟದಲ್ಲಿ ರಾಜ್ಯದ 5 ವಿಭಾಗಗಳ ಕ್ರೀಡಾ ಪಟುಗಳು ಕಳೆದ ವರ್ಷದ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಬೆಂಗಳೂರು ನಗರ ವಿಭಾಗದ ಪ್ರಸನ್ನಕುಮಾರ ವಿ.ಎಮ್‌ 200 ಮೀ ಓಟ ಸ್ಪರ್ಧೆ ಪುರುಷರ ವಿಭಾಗದಲ್ಲಿ 2024 ರಲ್ಲಿ ಬೆಂಗಳೂರು ನಗರ ವಿಭಾಗದ ಪ್ರಸನ್ನಕುರಮಾರ 21.56 ಸೆಕೆಂಡನಲ್ಲಿ ಓಡಿದ ದಾಖಲೆಯನ್ನು 21.35 ಸೆಕೆಂಡನಲ್ಲಿ ಕ್ರಮೀಸಿ ಹೊಸದಾಖಲೆ ನಿರ್ಮಿಸಿದ್ದಾರೆ.

ಬೆಂಗಳೂರು ನಗರ ವಿಭಾಗದ ವೈಬವ್‌ ಎಂ ಪಾಟೀಲ ಇವರು 5000 ಮೀ ಪುರುಷರ ವಿಭಾಗದ ಓಟದ ಸ್ಪರ್ಧೆಯಲ್ಲಿ ಕಳೆದ ವರ್ಷದ ಬೆಳಗಾವಿ ವಿಭಾಗದ ಬಾಲು ಅಗರಿ 15.09.86 ಸೆಕೆಂಡಗಳಲ್ಲಿ ಓಡಿದ ದಾಖಲೆಯನ್ನು ಕಡಿಮೆಗೊಳಿಸಿ ಕೆವಲ 15.00.08 ಸೆಕೆಂಡಗಳಲ್ಲಿ ಓಡಿ ಹೊಸದಾಖಲೆ ನಿರ್ಮಿಸಿದ್ದಾರೆ.

ಬೆಳಗಾವಿ ವಿಭಾಗದ ಪ್ರಿಯಾಂಕ ಅವರು 800 ಮೀ ಮಹಿಳಾ ವಿಭಾಗದ ಓಟದ ಸ್ಪರ್ಧೆಯಲ್ಲಿ ಕಳೆದ ವರ್ಷದ ರೇಖಾ ಪಿರೋಜಿ ಮೈಸೂರು ವಿಭಾಗ ಇವರು 2.15.69 ಸೆಕೆಂಡುಗಳಲ್ಲಿ ಓಡಿದ ಸಾಧನೆಯನ್ನು ಈ ಸಾರಿ 2.10.77 ಸೆಕೆಂಡಗಳಲ್ಲಿ ಕ್ರಮಿಸಿ ಹೊಸದಾಖಲೆ ನಿರ್ಮಿಸಿದ್ದಾರೆ.

ಮೈಸೂರು ವಿಭಾಗದ ತೇಜಲ್‌ ಕೆ.ಆರ್‌ ಮತ್ತು ತಂಡ ಪುರುಷರ ವಿಭಾಗದ 110 ಮೀ ಹರ್ಡಲ್ಸ್‌ ಸ್ಪರ್ಧೆಯಲ್ಲಿ 2024ರ ರಾಥೋಡ್‌ ಲೋಕೆಶ ದಾಮು ( ಬೆಂಗಳೂರ ನಗರ ) 15.55 ಸೆಕೆಂಡಗಳಲ್ಲಿ ಮಾಡಿದ ಸಾಧನೆಯನ್ನು ಮುರಿದು 15.10 ಸೆಕೆಂಡುಗಳಲ್ಲಿ ಓಡಿ ಹೊಸದಾಖಲೆ ನಿರ್ಮಿಸಿದ್ದಾರೆ.

ಮೈಸೂರು ವಿಭಾಗದ ಮಹ್ಮದ್‌ ಅಹ್ಮದ್‌ ಪುರುಷರ ವಿಭಾಗದ ಚಕ್ರ ಎಸೆತ ಸ್ಪರ್ಧೆಯಲ್ಲಿ ಕಳೆದ ವರ್ಷದ ದಾಖಲೆ ( ಬೆಂಗಳೂರು ಗ್ರಾಮಾಂತರ ವಿಭಾಗ)  ನಾಗೇಂದ್ರ ನಾಗಪ್ಪ ಅವರ ಹೆಸರಿನಲ್ಲಿ 52.78-ಮೀ ದಾಖಲೆಯನ್ನು ಮುರಿದು 54.78-ಮೀ ಚಕ್ರ ಎಸೆದು ನೂತನ ದಾಖಲೆ ನಿರ್ಮಿಸಿದ್ದಾರೆ.

ಬೆಂಗಳೂರು ನಗರ ವಿಭಾಗದ ವೈದವ್‌ ಎಂ ಪಾಟೀಲ ಪುರುಷರ ವಿಭಾಗದ 1500 ಮೀ ಓಟದ ಸ್ಪರ್ಧೆಯಲ್ಲಿ ಕಳೆದ ವರ್ಷದ ಅಶರಿತ್‌ ( ಬೆಂಗಳೂರು ಗ್ರಾಮಿಣ ವಿಭಾಗ) 3-57-93 ಸೆಕೆಂಡಿನ ದಾಖಲೆಯನ್ನು ಮುರಿದು 3-56-57 ಸೆಕೆಂಡನಲ್ಲಿ ಓಡಿ ಹೊಸ ದಾಖಲೆ ಬರೆದಿದ್ದಾರೆ.

ಬೆಳಗಾವಿ ವಿಭಾಗದ ಶಿಲ್ಪಾ ಹೊಸಮನಿ ಮಹಿಳಾ ವಿಭಾಗದ 1500 ಮೀ ಓಟದ ಸ್ಪರ್ಧೆಯಲ್ಲಿ ಕಳೆದ ವರ್ಷದ ಪ್ರಣತಿ ( ಬೆಂಗಳೂರು ಗ್ರಾಮಿಣ ವಿಭಾಗ ) 4-44-3 ಸೆಕೆಂಡಿನ ದಾಖಲೆಯನ್ನು ಅಳಸಿ 4-42-69 ಸೆಕೆಂಡನಲ್ಲಿ ಕ್ರಮೀಸಿ ನೂತನ ದಾಖಲೆ ಬರೆದಿದ್ದಾರೆ.Dasara Sports dasara

ಬೆಂಗಳೂರು ನಗರ ವಿಭಾಗದ ಪ್ರಸನ್ನಕುಮಾರ ವಿ.ಎಮ್‌ ಪುರುಷರ ವಿಭಾಗದ 100 ಮೀ ಓಟದ ಸ್ಪರ್ಧೆಯಲ್ಲಿ ಕಳೆದ ವರ್ಷದ ದಾಖಲೆ ಗೌತಮ್‌ ( ಬೆಂಗಳೂರು ಗ್ರಾಮಾಂತರ ವಿಭಾಗ) 10.74 ಸೆಕೆಂಡ್‌ ದಾಖಲೆಯನ್ನು ಮುರಿದು 10.56 ಸೆಕೆಂಡನಲ್ಲಿ ಕ್ರಮೀಸಿ 10-56 ಸೆಕೆಂಡನಲ್ಲಿ ಓಡಿ ಹೊಸ ದಾಖಲೆ ಬರೆದಿದ್ದಾರೆ.

ಮೈಸೂರು ದಸರಾ ಸಿ.ಎಂ ಕಪ್‌ 2026 ರಲ್ಲಿ ರಾಜ್ಯದ ವಿವಿಧ ವಿಭಾಗಗಳಿಂದ ಆಗಮಿಸಿದ 4500 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಕ್ರೀಡಾ ಸ್ಪೂರ್ತಿಯಿಂದ ಬಾಗವಹಿಸಿ  ದಸರಾ ಕ್ರೀಡಾಕೂಟವನ್ನು ಮೆರಗುಗೊಳಿಸಿದರು.Dasara Sports jk02_new jk02 new

Dasara Sports, Meet, CM Cup 2026, New Record, Set

English Summary
Title

Dasara Sports Meett CM 2026: Athletes Set New Meet Records

Short Description
The prestigious Dasara Sports Meet – CM Cup 2026 in Mysuru kicked off with sensational athletic performances. The elite state-level tournament witnessed four incredible new meet records set on the opening day. Thrilling victories highlighted the athletics track, with Bengaluru City's V.M. Prasanna Kumar blazing through the men's 100m in 10.56 seconds and Vaibhav M. Patil dominating the 1500m event. Concurrently, Mysuru’s Muhammad Saqlain Ahmed smashed the discus record, while Belagavi's Shilpa Hosamane established a new milestone in the women's 1500m. Organised by DYES, this year's grand event features thousands of athletes competing across 28 diverse sporting disciplines
Keywords
Dasara Sports, Meet, CM Cup 2026, New Record, Set