Tuesday, October 13, 2026

Dasara Wishes

Happy Dasara
Home Front Page 2 ಸಾವಿರ ರೂ. ಮೇಲ್ಪಟ್ಟ UPI ಪಾವತಿಗೆ ಶುಲ್ಕ ವಿಚಾರ: ದೀಪಾವಳಿ ಬಳಿಕ ಜಾರಿ

2 ಸಾವಿರ ರೂ. ಮೇಲ್ಪಟ್ಟ UPI ಪಾವತಿಗೆ ಶುಲ್ಕ ವಿಚಾರ: ದೀಪಾವಳಿ ಬಳಿಕ ಜಾರಿ

ನವದೆಹಲಿ,ಅಕ್ಟೋಬರ್‌,10,2026 (www.justkannada.in): ದೇಶಾದ್ಯಂತ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕ ವಿಧಿಸುವ ಪ್ರಕ್ರಿಯೆಯನ್ನು ದೀಪಾವಳಿ ಹಬ್ಬದ ಬಳಿಕ ಜಾರಿಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಗದಿಯಂತೆ ಇದೇ ಅಕ್ಟೋಬರ್ 15 ರಿಂದ ಯುಪಿಐ ಎಂಡಿಆರ್‌ ನಿಯಮ ಜಾರಿಗೆ ಬರಬೇಕಿತ್ತು. ಆದರೆ ವ್ಯಾಪಾರಿಗಳು ಮತ್ತು ಪಾವತಿ ಸೇವಾ ಸಂಸ್ಥೆಗಳ ತೀವ್ರ ಮನವಿಗೆ ಸ್ಪಂದಿಸಿರುವ ಎನ್‌ ಪಿಸಿಐ, ಈ ಪ್ರಸ್ತಾವನೆಯನ್ನು ತಡೆಹಿಡಿದಿತ್ತು.Regarding charges Allowing UPI to be used in Dubai too, MoU signed Allowing UPI to be used in Dubai too MoU signed

ಇದೀಗ ದೀಪಾವಳಿ ಬಳಿಕ ಯುಪಿಐ ಎಂಡಿಆರ್‌ ಜಾರಿ ಮಾಡಲು ನಿರ್ಧರಿಸಿದೆ.  ವ್ಯಕ್ತಿಯಿಂದ ವ್ಯಕ್ತಿಗೆ ಯುಪಿಐ ಪಾವತಿಗೆ ಯಾವುದೇ ಶುಲ್ಕವಿಲ್ಲ. ವಹಿವಾಟಿನ ಮೊತ್ತ ಎಷ್ಟೇ ಇದ್ದರೂ ಪಿ2ಪಿ ಪಾವತಿ ಸಂಪೂರ್ಣ ಉಚಿತವಾಗಿರಲಿದೆ. ಆದರೆ  2 ಸಾವಿರ ಕ್ಕಿಂತ ಹೆಚ್ಚಿನ ಪಿ2ಎಂ(ವ್ಯಕ್ತಿ ವ್ಯಾಪಾರಿ) ವಹಿವಾಟಿಗೆ ಎಂಡಿಆರ್‌ ಇರಲಿದೆ ಎಂದು ಎನ್‌ಪಿಸಿಐ ತಿಳಿಸಿದೆ.Regarding charges jk02_new jk02 new

 

English Summary
Title

New UPI Charges Over ₹2,000 Postponed Until After Diwali:

Short Description
The NPCI has officially delayed the rollout of the 0.4% Merchant Discount Rate (MDR) charges on UPI payments above ₹2,000 until after Diwali. Initially scheduled for October 15, 2026, this suspension aims to ease financial strain on merchants and shoppers during the peak festive season. Crucially, normal consumers will not be charged; this processing fee applies strictly to eligible merchants for high-value transactions, with standard fees capped at ₹300. Furthermore, all Person-to-Person (P2P) transfers, transactions below ₹2,000, and small businesses remain completely free from these fees.
Keywords
Regarding charges, UPI payments, above, ₹2, 000, Implementation, after, Diwali