ದಸರಾ ಜಾತ್ರೆ, ಎಣ್ಣೆಮಜ್ಜನ ಹಾಗೂ ಅಮಾವಾಸ್ಯೆ ದಿನ ಮಲೈಮಹದೇಶ್ವರ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ…

ಚಾಮರಾಜನಗರ,ಅಕ್ಟೋಬರ್,12,2020(www.justkannada.in):  ಕೊರೋನಾ ಹಿನ್ನೆಲೆ ಮಲೆ ಮಹದೇಶ್ವರಬೆಟ್ಟದಲ್ಲಿ ಈ ಬಾರಿ ನಡೆಯಲಿರುವ ದಸರಾ ಜಾತ್ರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರಾದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು,  ದಸರಾ ಜಾತ್ರೆ‌ ದಿನಗಳಂದು, ಮುಂಬರುವ ಎಣ್ಣೆಮಜ್ಜನ ಹಾಗೂ ಅಮಾವಾಸ್ಯೆ ದಿನಗಳಂದು ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.jk-logo-justkannada-logo

ಮ.ಬೆಟ್ಟದಲ್ಲಿ ಸರಳ ದಸರಾ‌ ಪೂಜೆಗಳ ಅಂಗವಾಗಿ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರಾಧಿಕಾರದ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ದಿ. 03/10/2020ರಂದು ನಡೆದ ಸಭೆಯ ತೀರ್ಮಾನದಂತೆ, ವಿಶೇಷ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ  ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.

ದಸರಾ ಜಾತ್ರೆ‌ ದಿನಗಳಂದು, ಮುಂಬರುವ ಎಣ್ಣೆಮಜ್ಜನ ಹಾಗೂ ಅಮಾವಾಸ್ಯೆ ದಿನಗಳಂದು ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಉಳಿದ‌ ದಿನಗಳು ಎಂದಿನಂತೆ ಬೆಳಿಗ್ಗೆ 7ರಿಂದ ಸಂಜೆ‌‌ 7ರವರೆಗೆ ದರ್ಶನ‌ ಹಾಗೂ ದಾಸೋಹ (ತಿಂಡಿ) ವ್ಯವಸ್ಥೆ ‌ಮುಂದುವರೆಯಲಿದೆ. ಈ ಸಮಯದಲ್ಲಿ ಭಾನುವಾರ ಮತ್ತು ಸೋಮವಾರ ಬೆಳಿಗ್ಗೆ‌ 11ರಿಂದ ಮಧ್ಯಾಹ್ನ 3ರವರೆಗೆ‌ ಹೆಚ್ಚು ಭಕ್ತಾದಿಗಳು ಭೇಟಿ ನೀಡಬಹುದಾದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತಾದಿಗಳು ಯಾವುದೇ ನೂಕುನುಗ್ಗಲು ಇಲ್ಲದೇ ದೇವಾಲಯದೊಳಗೆ ಹೋಗಿ ಬರಲು ವಿಶೇಷ ಕ್ಯೂಲೈನ್ ಮಾಡಿಸಲಾಗುತ್ತಿದೆ ಎಂದು ಜಯವಿಭವ ಸ್ವಾಮಿ ಹೇಳಿದ್ದಾರೆ.

ಇನ್ನು ಅಂತರಗಂಗೆಯಲ್ಲಿ ಸ್ನಾನ‌ ಮಾಡಲು ಅವಕಾಶವಿಲ್ಲ. ಬೃಹತ್ ಶೌಚಾಲಯದಲ್ಲಿ ಮಾತ್ರ ಸ್ನಾನ ಮಾಡಬಹುದು. ರಾತ್ರಿ ತಂಗಲು ವ್ಯವಸ್ಥೆ ಇರುವುದಿಲ್ಲ. ಕೊಠಡಿ ನೀಡುವಿಕೆ ನಿಷೇಧಿಸಿದೆ. ಹಾಗಾಗಿ ಯಾವುದೇ ಭಕ್ತಾದಿಗಳು ರಾತ್ರಿ ತಂಗಲು ತಯಾರಿ ಮಾಡಿಕೊಂಡು ಬರಬೇಡಿ. ಮುಡಿ ನೀಡಲು ಅವಕಾಶವಿಲ್ಲ. ಪ್ರಾಧಿಕಾರದ ಪೆಟ್ರೋಲ್ ಬಂಕ್, ಅಂಗಡಿಗಳು, ಲಾಡು ಪ್ರಸಾದದ ಕೌಂಟರ್‌ಗಳು, ವಿಶೇಷ ದಾಸೋಹದ ಕೌಂಟರ್‌ಗಳು, ಮಾಹಿತಿ ಕೇಂದ್ರ ತೆರೆದಿರಲಿವೆ.

ದೇವಾಲಯದಲ್ಲಿ, ದೇವರ ದರ್ಶನ, ಪೂಜೆ, ದಾಸೋಹ‌ ಸೇವೆಗಳು ಮಾತ್ರ ಇರಲಿವೆ. ಭಕ್ತಾದಿಗಳು ಎಲ್ಲಿಯೂ ಗುಂಪುಗುಂಪಾಗಿ ಸೇರದೇ, ಪೊಲೀಸ್ ಸ್ಟೇಷನ್ ಕಡೆಯಿಂದ ರಂಗಮಂದಿರಕ್ಕೆ ತೆರಳಿ, ವಿಶೇಷ ಕ್ಯೂಲೈನಿನ ಮೂಲಕವೇ ದೇವಾಲಯದ ಒಳಗೆ ಪ್ರವೇಶ ನೀಡಲಾಗುತ್ತದೆ.dasara-fair-restricted-malaimahadeshwara-hill-devotees

ರೂ. 500/-ಕ್ಕೆ ನೇರ ದರ್ಶನಕ್ಕೆ ವಿಶೇಷ ಪ್ರವೇಶ ದರ ಇದ್ದು, ಅವಶ್ಯವಿದ್ದವರು ರಂಗಮಂದಿರದಲ್ಲಿನ ವಿಶೇಷ ಕೌಂಟರ್‌ನಲ್ಲಿ ಟಿಕೇಟ್ ಪಡೆದು ಗೇಟ್ ನಂ 4 ಮೂಲಕ ಪ್ರವೇಶಿಸಬಹುದು. ಅಧಿಕಾರಿಗಳು, ಅವರ ಕುಟುಂಬದವರು, ಯಾವುದೇ ಗಣ್ಯವ್ಯಕ್ತಿಗಳ ಶಿಫಾರಸ್ಸು ಪತ್ರಗಳನ್ನು ಪಡೆದವರು ಸಹಾ (ಅಧಿಕೃತ ಕರ್ತವ್ಯ ನಿಮಿತ್ತ‌ ಬರುವವರನ್ನು ಹೊರತುಪಡಿಸಿ) ಈ ಸಮಯದಲ್ಲಿ ಧರ್ಮದರ್ಶನದ ಕ್ಯೂಲೈನಿನಲ್ಲೇ ಅಥವಾ ವಿಶೇಷ ದರ್ಶನದ ಟಿಕೇಟು ಖರೀದಿ ಮಾಡಿ ನೇರ ದರ್ಶನ ಕ್ಯೂನಲ್ಲೇ ಹೋಗಬೇಕು ಎಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ  ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.

key words: Dasara fair-restricted – Malaimahadeshwara hill-devotees