RO ಪ್ಲಾಂಟ್ ನಲ್ಲಿ ಕಲುಷಿತ ನೀರು ಸರಬರಾಜು: ಆರ್ ಟಿಐ ಕಾರ್ಯಕರ್ತನ ದೂರಿನ ನಂತರ ಎಚ್ಚೆತ್ತ ಅಧಿಕಾರಿಗಳು..

ಮೈಸೂರು, ಜೂನ್, 12,2023(www.justkannada.in): ನಗರದ  ಬೃಂದಾವನ ಬಡಾವಣೆಯಲ್ಲಿರುವ RO ಪ್ಲಾಂಟ್ ನಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದ್ದರೂ  ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳು ಇದೀಗ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅವರು ದೂರು ನೀಡಿದ ಬಳಿಕ ಎಚ್ಚೆತ್ತುಕೊಂಡು ಸ್ವಚ್ಛಗೊಳಿಸಿದ್ದಾರೆ.

RO ಪ್ಲಾಂಟ್ ನಲ್ಲಿ,  ಗೊಬ್ಬುವಾಸನೆಯುಕ್ತ  ಕಲುಷಿತ ನೀರು ಸರಬರಾಜಾಗುತ್ತಿದ್ದರೂ ಸುಮ್ಮನಿದ್ದ ಅಧಿಕಾರಿಗಳಿಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದೂರು ನೀಡುವ ಮೂಲಕ ಎಚ್ಚರಿಸಿದ್ದರು. ಬಳಿಕ ಎಚ್ಚೆತ್ತ ಅಧಿಕಾರಿಗಳು ಶುದ್ದ ಕುಡಿಯುವ ನೀರಿನ ಘಟಕವನ್ನ ಸ್ವಚ್ಛಗೊಳಿಸಿದ್ದಾರೆ.

ಬೋರ್ ವೆಲ್ ಮೂಲಕ ನೀರಿನ ಸಂಪರ್ಕ ಪಡೆಯುವ ಜಾಗದಲ್ಲಿ ಅಕ್ರಮವಾಗಿ ಕಾವೇರಿ ನೀರು ಸಂಪರ್ಕ ಪಡೆದು ಸರಬರಾಜು ಮಾಡುತ್ತಿದ್ದಾರೆ. ಅಲ್ಲದೆ ಏಜೆನ್ಸಿಯವರು ಮೀಟರ್ ಸಹ ಅಳವಡಿಸದೆ  ನೀರು ಬಳಕೆ ಮಾಡುತ್ತಿದ್ದು, ಸ್ವಚ್ಛತೆಗೂ ಸಹ ಕಾವೇರಿ ನೀರನ್ನೇ ಬಳಕೆ ಮಾಡಲಾಗುತ್ತಿದೆ. ಪ್ಲಾಂಟ್ ಕಮರ್ಷಿಯಲ್ ಆಗಿರುವುದರಿಂದ ಇದುವರೆಗೆ ಬಳಕೆಯಾದ ನೀರಿನ ಮೊತ್ತವನ್ನ ಏಜೆನ್ಸಿಯವರಿಂದ ವಸೂಲಿ ಮಾಡಬೇಕು ಎಂದು ಆರ್ ಟಿಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ಆಗ್ರಹಿಸಿದ್ದಾರೆ.

Key words: Contaminated- water- supply -RO plant-mysore-complaint – RTI activist