ಪ್ರಾಕ್ಟೀಸ್ ಸೆಷನ್’ನಲ್ಲಿ ‘ಅರ್ಜುನ’ ಫಸ್ಟ್ ಕ್ಲಾಸ್ !

ಮೈಸೂರು, ಅಕ್ಟೋಬರ್ 01, 2019 (www.justkannada.in): ದಸರಾ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಕ್ಯಾಪ್ಟನ್ ಅರ್ಜುನ ಪ್ರಾಕ್ಟೀಸ್ ಸೆಷನ್ ನಲ್ಲಿ ಫಸ್ಟ್ ಕ್ಲಾಸ್ ಆಗಿ ಪಾಸಾಗಿದ್ದಾರೆ.

ನಾಡದೇವತೆಯಿರುವ ಅಂಬಾರಿಯನ್ನು ಹೊರಲಿರುವ ಅರ್ಜುನ ಒಟ್ಟು 750 ಕೆಜಿ ಭಾರ ಹೊತ್ತು ಯಶಸ್ವಿಯಾಗಿ ತಾಲೀಮು ನಡೆಸಿದ್ದಾನೆ.

ಅರಮನೆ ಆವರಣದಿಂದ ಸಯ್ಯಾಜಿರಾವ್​ ರಸ್ತೆ ಮೂಲಕ ಹೈವೇ ವೃತ್ತದ ಮೂಲಕ ಯಶಸ್ವಿಯಾಗಿ ಅರ್ಜುನ ಬನ್ನಿಮಂಟಪ ತಲುಪಿದ್ದಾನೆ

ಅರ್ಜುನನ ಹಿಂದೆ ಅಭಿಮನ್ಯು, ಕಾವೇರಿ, ವಿಜಯ, ಈಶ್ವರ, ದುರ್ಗಾಪರಮೇಶ್ವರಿ, ಜಯಪ್ರಕಾಶ್​, ಲಕ್ಷ್ಮೀ ಸೇರಿ ಒಟ್ಟು 11 ಆನೆಗಳು ಹೆಜ್ಜೆಹಾಕುತ್ತ ತಾಲೀಮು ಮುಂದುವರಿಸಿವೆ.