ಸರಾಗವಾಗಿ ಜಂಬೂಸವಾರಿ ಕಣ್ತುಂಬಿಕೊಳ್ಳಲು ಮುಂಚಿತವಾಗಿ ದಸರಾ ಗೋಲ್ಡ್ ಕಾರ್ಡ್ ಕಾಯ್ದಿರಿಸಿ !

ಮೈಸೂರು, ಅಕ್ಟೋಬರ್ 01, 2019 (www.justkannada.in): ದಸರಾ ಕಣ್ತುಂಬಿಕೊಳ್ಳಲು ಕಾದಿರುವ ಪ್ರವಾಸಿಗರಿಗೆ ದಸರಾ ಗೋಲ್ಡ್ ಗಳ ಮಾರಾಟವನ್ನು ಜಿಲ್ಲಾಡಳಿತ ಆರಂಭಿಸಿದೆ.

ಒಂದು ಗೋಲ್ಡ್ ಕಾರ್ಡ್ ಗೆ 4 ಸಾವಿರ ದರ ನಿಗದಿಪಡಿಸಲಾಗಿದೆ. ಎರಡು ಸಾವಿರ ಗೋಲ್ಡ್ ಕಾರ್ಡ್ ಮುದ್ರಣ ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ಗೋಲ್ಡ್ ಕಾರ್ಡ್ ನವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಗೋಲ್ಡ್ ಕಾರ್ಡ್ ಪಡೆದವರಿಗೆ ಸ್ಥಳ ಕಾಯ್ದಿರಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಗೋಲ್ಡ್ ಕಾರ್ಡ್ ಹೊಂದಿರುವವರು ಬಂದಾಗ ಸ್ಥಳವನ್ನು ಬಿಟ್ಟುಕೊಡಲಾಗುತ್ತದೆ. ಈ ಬಾರಿ ಪಾಸ್ ಗಳನ್ನು ಸಹ ಮುದ್ರಣ ಮಾಡಲಾಗಿದ್ದು, 1000, 500, 250 ರೂಪಾಯಿ ದರದ ಪಾಸುಗಳನ್ನು ಮುದ್ರಿಸಲಾಗಿದೆ

. ಅರಮನೆ ಆವರಣ, ಬನ್ನಿಮಂಟಪ ಮೈದಾನದ ಸೀಟುಗಳಿಗೆ ಅನುಗುಣವಾಗಿ ಪಾಸ್ ಮುದ್ರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.