ಟ್ರೆಂಡ್ ಸೃಷ್ಟಿಸಲು ಕಿಚ್ಚ-ಭಂಡಾರಿ ಕಾಂಬೀನೇಷನ್ ಸಿನಿಮಾ ರೆಡಿ !

ಬೆಂಗಳೂರು, ಅಕ್ಟೋಬರ್ 01, 2019 (www.justkannada.in): ನಟ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಜತೆಗಿನ ಬಿಗ್ ಬಜೆಟ್ ಸಿನಿಮಾ ಟೈಟಲ್ ಫಿಕ್ಸ್ ಆಗಿದೆ.

‘ಫ್ಯಾಂಟಂ’ ಎಂದು ಟೈಟಲ್ ಫೈನಲ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ನಿರ್ದೇಶಕ ಅನೂಪ್ ಭಂಡಾರಿ ಎರಡು ಮೂರು ಟೈಟಲ್ ಇದೆ. ಅದರಲ್ಲಿ ಒಂದನ್ನು ಸದ್ಯದರಲ್ಲೇ ಫೈನಲ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಟೈಟಲ್ ಅಂತಿಮವಾದ ನಂತರ ಅಧಿಕೃತವಾಗಿ ಅನೌನ್ಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಟೈಟಲ್ ಫೈನಲ್ ಆಗೋ ಮೊದಲೇ ಚಿತ್ರದ ಟೈಟಲ್ ಟ್ರೆಂಡ್ ಆಗ್ತಾ ಇರೋದು ಇದೇ ಮೊದಲು.