ಡ್ರಗ್ಸ್ ದಂಧೆ ಚಿರಂಜೀವಿ ಕುರಿತು ಮಾತನಾಡಿದ ದರ್ಶನ್

ಬೆಂಗಳೂರು, ಆಗಸ್ಟ್31 2020 (www.justkannada.in): ಸತ್ತವನು ಕೊಲೆಗಾರನೇ ಆಗಿದ್ದರೂ ಅವರ ತಿಥಿ ಮಾಡುತ್ತೇವೆ. ಹೀಗಿರುವಾಗ ಚಿರು ಬಗ್ಗೆ ಕೆಟ್ಟದ್ದು ಮಾತನಾಡುವುದು ಎಷ್ಟು ಸರಿ? ಎಂದು ನಟ ದರ್ಶನ್ ಪ್ರಶ್ನಿಸಿದ್ದಾರೆ.

ಚಿರಂಜೀವಿ ಸರ್ಜಾಗೂ ಹಾಗೂ ಡ್ರಗ್ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾತನಾಡಿರುವ ಅವರು, ಚಿರು ಹೆಸರನ್ನು ತುಂಬಾ ಎತ್ತುತ್ತಿದ್ದಾರೆ. ಅದು ಸರಿಯಲ್ಲ. ಸತ್ತವನು ಕೊಲೆಗಾರನೇ ಆಗಿದ್ದರೂ ಅವರ ತಿಥಿ ಮಾಡುತ್ತೇವೆ. ಹೀಗಿರುವಾಗ ಚಿರು ಬಗ್ಗೆ ಕೆಟ್ಟದ್ದು ಮಾತನಾಡುವುದು ಎಷ್ಟು ಸರಿ? ಎಂದಿದ್ದಾರೆ.

ಒಂದೊಮ್ಮೆ ಚಿರು ಮೇಲಿರುವ ಆರೋಪ ಸಾಬೀತಾದರೂ ಯಾರಾದರೂ ಶಿಕ್ಷೆ ಕೊಡಲು ಸಾಧ್ಯವೇ? ಹೀಗಾಗಿ ಸತ್ತವರ ಬಗ್ಗೆ ದಯವಿಟ್ಟು ಕೆಟ್ಟ ಮಾತು ಬೇಡ ಎಂದು ದರ್ಶನ್​ ಮನವಿ ಮಾಡಿದ್ದಾರೆ.