ಸಲಗ ಚಿತ್ರದ ಹಾಡು ರಿಲೀಸ್ ಮಾಡಲಿದ್ದಾರೆ ಪವರ್ ಸ್ಟಾರ್

ಬೆಂಗಳೂರು, ಆಗಸ್ಟ್31 2020 (www.justkannada.in): ಸಲಗ ಚಿತ್ರಕ್ಕೆ ಈಗ ಪುನೀತ್ ರಾಜ್ ಕುಮಾರ್ ಕೈ ಜೋಡಿಸಿದ್ದಾರೆ.

ಮಡಿಕೇರಿಯಲ್ಲಿ ಸಾಂಗ್ ಶೂಟಿಂಗ್ ಮಾಡಿದ ಮಳೆಯೇ‌ ಮಳೆಯೇ ಹಾಡನ್ನು ಸೆಪ್ಟೆಂಬರ್ 5 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಲಿದ್ದಾರೆ.

ಈ ಮೂಲಕ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ಜನರಿಗೆ ದಿನೇ ದಿನೇ ಹೊಸ ಸುದ್ದಿ ನೀಡುತ್ತಿದೆ.  ಪುನೀತ್ ರಾಜ್‍ಕುಮಾರ್ ಹಾಡನ್ನು ಬಿಡುಗಡೆ ಮಾಡುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ.