Saturday, October 17, 2026

Dasara Wishes

Happy Dasara
Home Cinema ಶಿವರಾಜ್ ಕೆ.ಆರ್. ಪೇಟೆ ಪುತ್ರನಿಗೆ ಗಿಫ್ಟ್ ಕೊಟ್ಟ ಚಾಲೆಂಜಿಂಗ್ ಸ್ಟಾರ್

ಶಿವರಾಜ್ ಕೆ.ಆರ್. ಪೇಟೆ ಪುತ್ರನಿಗೆ ಗಿಫ್ಟ್ ಕೊಟ್ಟ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು, ಜನವರಿ 21, 2021 (www.justkannada.in): 

ನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಪುತ್ರನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಶಿವರಾಜ್ ಕೆ ಪುತ್ರ ವಂಶಿಕ್ ಬರ್ತ್ ಗೆ ದರ್ಶನ್ ತಾವು ಸೆರೆ ಹಿಡಿದಿರುವ ವನ್ಯಜೀವಿ ಫೋಟೋವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ನನ್ನ ಪುತ್ರನ ಅಚ್ಚುಮೆಚ್ಚಿನ ದರ್ಶನ್ ಸರ್ ಅವರನ್ನ ಮೀಟ್ ಮಾಡಿ ಅವರ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮ ಪಟ್ಟೆವು ಎಂದು ಶಿವರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಕಿರಿಯರ ಮೇಲಿನ ಅವರ ಪ್ರೀತಿಗೆ ನಾನು ನನ್ನ ಕುಟುಂಬ ಋಣಿ. ಥ್ಯಾಂಕ್ಯೂ ಡಿ ಬಾಸ್ ಹಾಗೆಯೇ ನನ್ನ ಮಗನಿಗೆ ನಿಮ್ಮ ಹಾರೈಕೆಗಳು ಇರಲಿ ಶಿವರಾಜ್ ಹೇಳಿದ್ದಾರೆ.