Monday, September 28, 2026

BDA Apartments

ಇದೇ ತಿಂಗಳ 10ರಿಂದ ಚಾಲೆಂಜಿಂಗ್ ಸ್ಟಾರ್ ವೀರಮದಕರಿ ನಾಯಕ ಶೂಟಿಂಗ್ ಶುರು ! BDA JK_Adv ...
Home Cinema ಇದೇ ತಿಂಗಳ 10ರಿಂದ ಚಾಲೆಂಜಿಂಗ್ ಸ್ಟಾರ್ ವೀರಮದಕರಿ ನಾಯಕ ಶೂಟಿಂಗ್ ಶುರು !

ಇದೇ ತಿಂಗಳ 10ರಿಂದ ಚಾಲೆಂಜಿಂಗ್ ಸ್ಟಾರ್ ವೀರಮದಕರಿ ನಾಯಕ ಶೂಟಿಂಗ್ ಶುರು !

ಬೆಂಗಳೂರು, ಫೆಬ್ರವರಿ 04, 2020 (www.justkannada.in): ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ವೀರ ಮದಕರಿನಾಯಕ ಶೂಟಿಂಗ್ ಫೆಬ್ರವರಿ 10 ರಿಂದ ಆರಂಭವಾಗುತ್ತಿದೆ.

ರಾಬರ್ಟ್ ಸಿನಿಮಾ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಸಿನಿಮಾ ರಾಜ ವೀರ ಮದಕರಿನಾಯಕ. ಚಿತ್ರದುರ್ಗದ ಮದಕರಿನಾಯಕನ ಐತಿಹಾಸಿಕ ಕತೆಯುಳ್ಳ ಸಿನಿಮಾ ದರ್ಶನ್ ಸಿನಿ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ಸಿನಿಮಾವಾಗಲಿದೆ. ಇದೊಂದು ಅದ್ಧೂರಿ ವೆಚ್ಚದ ಸಿನಿಮಾವಾಗಲಿದೆ.

ಈ ಸಿನಿಮಾದ ಚಿತ್ರೀಕರಣಕ್ಕಾಗಿಯೇ ವಿಶೇಷ ಸೆಟ್ ಹಾಕಲಾಗಿದೆ. ಸುಮಲತಾ ಅಂಬರೀಶ್ ಈ ಸಿನಿಮಾದಲ್ಲಿ ದರ್ಶನ್ ತಾಯಿಯ ಪಾತ್ರ ಮಾಡುತ್ತಿರುವುದು ವಿಶೇಷವಾಗಿದೆ.