ಅಪ್ಪು ಬ್ಯಾನರ್ ನಲ್ಲಿ ‘ಒನ್ ಕಟ್ ಟೂ ಕಟ್’ ಎಂದ ಡ್ಯಾನಿಷ್

ಬೆಂಗಳೂರು, ಜನವರಿ 02, 2021 (www.justkannada.in): ಪುನೀತ್ ರಾಜಕುಮಾರ್  ಬ್ಯಾನರ್ ಹೊಸಸಿನಿಮಾದಲ್ಲಿ ಡ್ಯಾನಿಶ್ಸೇಠ್ನಾಯಕರಾಗಿ ಆಯ್ಕೆಯಾಗಿದ್ದಾರೆ.

ಹೌದು. ಪುನೀತ್ ರಾಜಕುಮಾರ್ ತಮ್ಮ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಮತ್ತೊಂದು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಈ ಹಿಂದೆ ಪಿಆರ್ ಕೆ ಬ್ಯಾನರ್ ನಲ್ಲಿ ಡ್ಯಾನಿಶ್ ಫ್ರೆಂಚ್ ಬಿರಿಯಾನಿ’ ಸಿನಿಮಾಗೆ ನಾಯಕರಾಗಿದ್ದರು. ಇದೀಗ ಒನ್ ಕಟ್ ಟೂ ಕಟ್ ಎಂಬ ಹೆಸರಿನ ಸಿನಿಮಾದಲ್ಲೂ ಡ್ಯಾನಿಷ್ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದ್ದು, ಫೆಬ್ರವರಿಯಿಂದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.