Sunday, September 13, 2026

BDA Apartments

ತಮಿಳುನಾಡಿಗೆ ನೀರು ಹರಿಸಿ: ಕರ್ನಾಟಕಕ್ಕೆ ಶಾಕ್ ನೀಡಿದ CWRC BDA JK_Adv BDA Adv
Home Front Page ತಮಿಳುನಾಡಿಗೆ ನೀರು ಹರಿಸಿ: ಕರ್ನಾಟಕಕ್ಕೆ ಶಾಕ್ ನೀಡಿದ  CWRC

ತಮಿಳುನಾಡಿಗೆ ನೀರು ಹರಿಸಿ: ಕರ್ನಾಟಕಕ್ಕೆ ಶಾಕ್ ನೀಡಿದ  CWRC

ನವದೆಹಲಿ,ಜುಲೈ,28,2026 (www.justkannada.in):  ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಕೆಆರ್ ಎಸ್ ಸೇರಿ ರಾಜ್ಯದ ಜಲಾಶಯಗಳು  ಭರ್ತಿಯಾಗದೇ ಕುಡಿಯುವ ನೀರಿಗೂ ಹಾಹಾಕಾರ ಪಡುವ ಪರಿಸ್ಥಿತಿ ಇದೆ.  ಇದೀಗ ಇಂತಹ ಸಂದರ್ಭದಲ್ಲೂ ಇದೀಗ ತಮಿಳುನಾಡಿಗೆ  ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿಯು ಸೂಚನೆ ನೀಡಿದೆ.

ಇಂದು ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಮುಂದಿನ 15 ದಿನಗಳವರೆಗೆ ಪ್ರತಿನಿತ್ಯ 3500 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ.ತಮಿಳುನಾಡಿಗೆ ನೀರು ಹರಿಸಿ BDA JK_Adv BDA Adv

ರಾಜ್ಯದಲ್ಲಿ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಆರ್ ಎಸ್ ಸೇರಿ ಜಲಾಶಯಗಳು  ಭರ್ತಿಯಾಗದೇ ಬರ ಪರಿಸ್ಥಿತಿ ಆವರಿಸಿದೆ. ಈ ನಡುವೆಯೂ ಇದೀಗ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ಕೊಟ್ಟಿದೆ. ಆಗಸ್ಟ್ 3 ರಂದು ತಮಿಳುನಾಡಿನ ಸಿಎಂ ವಿಜಯ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು ಅಂತು ಮೇಕೆದಾಟು ಯೋಜನೆ ಕಾವೇರಿ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಯಾಗುವ ಸಾಧ್ಯತೆ ಇದೆ.ಕರ್ನಾಟಕಕ್ಕೆ ಶಾಕ್ ನೀಡಿದ CWRC jk02_new jk02 new

Key words: CWRC, Karnataka, releasing, water , Tamil Nadu