ಹೊತ್ಕೊಂಡ್ ಹೋದ ನಾಯಿ ಶಿಕಾರಿ ಮಾಡುತ್ತಾ..?   ‘ಕೈ’ ಡಿಜಿಟಲ್ ಸದಸ್ಯತ್ವದ ಬಗ್ಗೆ ಮಾಜಿ ಸಚಿವ ಸಿ.ಟಿ ರವಿ ಲೇವಡಿ

ಚಿಕ್ಕಮಗಳೂರು,ಮಾರ್ಚ್,12,2022(www.justkannada.in):  ಕಾಂಗ್ರೆಸ್ ನ ಡಿಜಿಟಲ್ ಸದಸ್ಯತ್ವದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಲೇವಡಿ ಮಾಡಿದ್ದಾರೆ.

ಹೊತ್ಕೊಂಡ್ ಹೋದ ನಾಯಿ ಶಿಕಾರಿ ಮಾಡುತ್ತಾ..?  ಹಣ,ಆಸೆ ಆಮಿಷ ಒಡ್ಡಿ ಸೆಳೆದರೇ ಪಕ್ಷ ಎಲ್ಲಿರುತ್ತದೆ  ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಸದಸ್ಯರಾಗುವವರು ಉಳಿಯುತ್ತಾರೆ. ವಿಚಾರಧಾರೆ ನಾಯಕತ್ವ ನಂಬಿದವರು ಉಳಿಯುತ್ತಾರೆ.  ಇಲ್ಲ ಅಂದ್ರೆ 6 ಕೊಟ್ರೆ ಅತ್ತೆ ಕಡೆ 3 ಕೊಟ್ರೆ ಮಾವನ ಕಡೆ ಅಂತಾ ಅಲ್ಲಿ ಇಲ್ಲಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ.  2023 ಮಾರ್ಚ್ ಬಳಿಕವೇ ಚುನಾವಣೆ ನಡೆಯುತ್ತದೆ ನಾಯಕತ್ವ ಬದಲಾವಣೆ ಇಲ್ಲ ನಾನು ಪಕ್ಷದ ಕಾರ್ಯಕರ್ತ ಅಷ್ಟೆ. ಕೊಟ್ಟ ಜವಾಬ್ದಾರಿ ನಿರ್ವಹಿಸುವೆ. ಎಂದು ಸಿಟಿ ರವಿ ತಿಳಿಸಿದರು.

Key words: CT Ravi-congress-membership- Campaign