ಯಾರೇ ರಾಜೀನಾಮೆ ನೀಡಿದ್ರೂ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ.

ಕಲ್ಬುರ್ಗಿ,ಮಾರ್ಚ್,12,2022(www.justkannada.in):  ಸಿಎಂ ಇಬ್ರಾಹಿಂ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಯಾರೇ ರಾಜೀನಾಮೆ ನೀಡಿದ್ರೂ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ ಎಂದಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ಇಬ್ರಾಹಿಂ ಪಕ್ಷ ಬಿಟ್ಟಿರೋ ವಿಚಾರ ಗೊತ್ತಿಲ್ಲ. ಕಾಂಗ್ರೆಸ್ ಗೆ ಯಾರೇ ರಾಜೀನಾಮೆ ನೀಡಿದರೂ ಪರಿಣಾಮ ಆಗಲ್ಲ. ಪಕ್ಷ ಬಿಟ್ಟರೇ ಡ್ಯಾಮೇಜ್ ಹಗಲ್ಲ.  ಪಕ್ಷಕ್ಕೆ ಹಲವರು ಬರುತ್ತಿದ್ದಾರೆ ಹೋಗುತ್ತಿದ್ದಾರೆ. ಹೀಗಾಗಿ ಇಬ್ರಾಹಿಂ ಬಿಟ್ಟರೂ ಆಗಲ್ಲ ನಾನು ಬಿಟ್ಟರೂ  ಡ್ಯಾಮೇಜ್ ಆಗಲ್ಲ ಎಂದರು.

ಈ ಹಿಂದಿನಿಂದಲೂ ಸಿಎಂ ಇಬ್ರಾಹಿಂ ನನ್ನ  ಸ್ನೇಹಿತ ಈಗಲೂ ನನ್ನ ಸ್ನೇಹಿತ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: CM Ibrahim- Resignation-siddaramaiah