ಸಿಎಂ ಇಬ್ರಾಹಿಂ ಅವರದ್ಧು ಸೆಲ್ಫ್ ಅಜೆಂಡಾ, ನಮ್ಮದು ಪಾರ್ಟಿ ಅಜೆಂಡಾ- ಡಿ.ಕೆ ಶಿವಕುಮಾರ್ ಕಿಡಿ.

ಬೆಂಗಳೂರು,ಮಾರ್ಚ್,12,2022(www.justkannada.in):  ಎಂಎಲ್ ಸಿ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಸಿಎಂ ಇಬ್ರಾಹಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಸಿಎಂ ಇಬ್ರಾಹಿಂ ಅವರದ್ಧು ಸೆಲ್ಫ್ ಅಜೆಂಡಾ, ನಮ್ಮಗೆ ಪಾರ್ಟಿ ಅಜೆಂಡಾ ಮುಖ್ಯ. ಸಿಎಂ ಇಬ್ರಾಹಿಂಗೆ ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದೆ.  ಇಬ್ರಾಗೂ ಆಸೆ ಇದೆ ಪಕ್ಷದಲ್ಲಿ ಇದ್ದು ಫೈಟ್ ಮಾಡಬೇಕು. ಸಿಎಂ ಇಬ್ರಾಹಿಂ ಅವರನ್ನ ಎರಡು ಬಾರಿ ಎಂಎಲ್ ಸಿ ಮಾಡಿದ್ದೇವೆ.  ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ  ಅವರಿಗೆ ಟಿಕಟ್ ನೀಡಿದವು.  ಸೋತರು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಿದವು ಎಂದು ಟಾಂಗ್ ನೀಡಿದರು.

ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಡಿ.ಕೆ ಶಿವಕುಮಾರ್, ಬಿಜೆಪಿ ಪಕ್ಷ ಬ್ರೋಕರ್ ಪಕ್ಷ.  ಬಿಜೆಪಿಯಲ್ಲಿ ಸಾವಿರಾರು ಸಮಸ್ಯೆಗಳು ಇದೆ. ಬಿಜೆಪಿ ತಟ್ಟೆಯಲ್ಲಿ ಸಾವಿರಾರು ಹೆಗ್ಗಣ ಬಿದ್ದಿದೆ. ಈಶ್ವರಪ್ಪ ಪಕ್ಷದ ವಿರುದ್ಧವೇ ದೂರು ಕೊಡ್ತಾರೆ.  ನಿರಾಣಿ ನಾನೇ ಸಿಎಂ ಅಂತಾರೆ. ಯತ್ನಾಳ್ ಪಕ್ಷದ ವಿರುದ್ಧವೇ ಮಾತನಾಡ್ತಾರೆ.  ಕಾಂಗ್ರೆಸ್ ನಲ್ಲಿ ಈ ರೀತಿ ಸಮಸ್ಯೆ ಇದೆಯಾ..? ಎಂದು ಪ್ರಶ್ನಿಸಿದರು.

Key words: CM Ibrahim- resigns-dk shivakumar