ಮೈಮುಲ್’ನಲ್ಲಿ ಅಕ್ರಮ ನೇಮಕಾತಿ ವಿಚಾರದಲ್ಲಿ ಕೋಟ್ಯಂತರ ರೂ. ಅಕ್ರಮ: ಶಾಸಕ ಸಾ ರಾ ಮಹೇಶ್ ಹೊಸ ಬಾಂಬ್

ಮೈಸೂರು, ಮೇ 12, 2020 (www.justkannada.in): ಮೈಮುಲ್ ಅಕ್ರಮದ ವಿಚಾರವಾಗಿ ಸಾ ರಾ ಮಹೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರು ಮೈಮುಲ್‌ನಲ್ಲಿ ಅಕ್ರಮ ನೇಮಕಾತಿ ನಡೆಯುತ್ತಿದೆ. ಈಗಾಗಲೇ ಮ್ಯಾಚ್ ಫಿಕ್ಸಿಂಗ್ ಆರಂಭವಾಗಿದೆ.

ಈ ಕೂಡಲೇ ನೇಮಕಾತಿ ಅಕ್ರಮದ ಬಗ್ಗೆ ಸೂಕ್ತ ತನಿಖೆ ಮಾಡಬೇಕು‌ ಎಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದ್ದಾರೆ.

ಈ ಸಂಬಂಧ ಸಿಎಂ ಬಿಎಸ್‌ವೈಗೆ ಪತ್ರ ಬರೆದ ಶಾಸಕ ಸಾ.ರಾ.ಮಹೇಶ್.  ಇಂದು ಒಕ್ಕೂಟದ ಸಭೆಯಲ್ಲಿ ಅಕ್ರಮವಾಗಿ ಅನುಮತಿ ನೀತಿ ಹೆಚ್ಚುವರಿ ಹುದ್ದೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಪ್ರಸ್ತುತ 168 ಹುದ್ದೆಗಳ ನೇಮಕಾತಿಗೆ ಆದೇಶ ಇದೆ. ಆದ್ರೆ ಹೆಚ್ಚುವರಿಯಾಗಿ 25 ಹುದ್ದೆಗಳನ್ನ ಇವರು ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. 18 ಸಾವಿರ ಜನ ಪರೀಕ್ಷೆ ಎದುರಿಸಿದ್ರು 168 ಹಾಗೂ 25 ಮಂದಿ ಮಾತ್ರ ಪಾಸಾಗಿದ್ದಾರೆ. ಈ ಪರೀಕ್ಷೆ ನಡೆಸಿದ್ದ ಏಜೆನ್ಸಿ ಮೇಲೂ ಆರೋಪ ಇದೆ.ಇದು ಮಂಗಳೂರು ಮೂಲದ ಏಜೆನ್ಸಿ. ಇವೇಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸದ್ಯ ನಡೆಯುತ್ತಿರುವ ಎಲ್ಲ ಪ್ರಕ್ರಿಯೇ ಬಗ್ಗೆ ಸಮಗ್ರ ತನಿಖೆ ಆಗಲಿ. ಎರಡನೆ ಹಂತದಲ್ಲು ಆಡಿಯೋ ಬಿಡುಗಡೆ ಮಾಡುತ್ತೇನೆ. ನಡೆದಿರುವ ಚರ್ಚೆ ಅಕ್ರಮ ಬಹಿರಂಗವಾಗಲಿದೆ. ಮೈಮುಲ್ ನೇಮಕಾತಿ ಪ್ರಕ್ರಿಯೆ ಬಗ್ಗೆ ಸದನದಲ್ಲಿ ಮೈಸೂರಿನ 5 ಶಾಸಕರು ಪ್ರಶ್ನೆ ಮಾಡಿದ್ವಿ. ಆಗ ನಮಗೆ ಉತ್ತರ ಕೊಟ್ಟಿದ್ದ ಸಚಿವರು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ರು. ಆದ್ರೆ ಇಲ್ಲಿ ತಮಗಿಷ್ಟ ಬಂದಂತೆ ನೇಮಕಾತಿ ನಡೆಯುತ್ತಿದೆ. ಈ ನೇಮಕಾತಿಯ ವ್ಯವಹಾರ 30-40 ಕೋಟಿಯಷ್ಟಿದೆ.

ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ನಿಂದಲೂ ಹಣ ಪಡೆಯಲಾಗಿದೆ. ಇಲ್ಲಿನ ಪ್ರತಿ ಹುದ್ದೆಯೂ ಹಣಕ್ಕೆ ಮಾರಾಟವಾಗಿದೆ. ಹಣ ನೀಡಲು ಸಾಧ್ಯವಾಗದ ಗರ್ಭಿಣಿ ಮಹಿಳೆಯೊಬ್ಬರು ಶಾಕ್ ನಿಂದ ಆಸ್ಪತ್ರೆ ಸೇರುವಂತಾಗಿದೆ. ಒಕ್ಕೂಟದ ಅಧ್ಯಕ್ಷರು ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.