ಸರಕಾರ ನೆರವಿನ ನಿರೀಕ್ಷೆಯಲ್ಲಿ ಖಾಸಗಿ ಶಾಲಾ-ಕಾಲೇಜು ಬೋಧಕ ಸಿಬ್ಬಂದಿ

ಬೆಂಗಳೂರು, ಮೇ 12, 2020 (www.justkannada.in): ಲಾಕ್ ಡೌನ್ ಜಾರಿಯಿಂದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕ ಸಿಬ್ಬಂದಿ ಗೋಳು ಚಿಂತಾಜನಕವಾಗಿದೆ. ಸರಕಾರ ನಮ್ಮ ನೆರವಿಗೆ ಧಾವಿಸಬೇಕೆಂದು ಖಾಸಗಿ ಶಾಲಾ-ಕಾಲೇಜು ಬೋಧಕ ಸಿಬ್ಬಂದಿ ಮನವಿ ಮಾಡಿದ್ದಾರೆ.

ಎಲ್ಲರೂ ಕೂಲಿಕಾರ್ಮಿಕರು , ರೈತರೂ ಹಾಗೂ ಸಣ್ಣಪುಟ್ಚ ವ್ಯಾಪಾರಿಗಳ ಬಗೆಗೆ ಕಾಳಜಿವಹಿಸುವದು ಕಾಣುತ್ತೀದ್ದೆವೆ. ಆದರೆ ಶಿಕ್ಷಣ ಪಡೆದು ಪದವಿ, ತರಬೇತಿ ಪಡೆದು  ನಿರದ್ಯೋಗಿಗಳು ಅಲ್ಲ ಇತ್ತ ಸ್ವಯಂ ಉದ್ಯೋಗಿಗಳು ಅಲ್ಲದೆ ಪದವಿ ಪಡೆದ ಪಾಪ, ನತದೃಷ್ಟತೆಯಿಂದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಉದ್ಯೋಗದಲ್ಲಿದ್ದವರ ಸ್ಥಿತಿ ಯಾರಿಗೂ ಕಾಣುವುದಿಲ್ಲ.

ಈ ವರ್ಗ ಉಪವಾಸ ಬಿದ್ದರೂ, ಕಷ್ಟ ಇದ್ದರೂ ಯಾರ ಮುಂದೆ ಮನವಿ, ಬೇಡಿಕೆ ಇಡಲು ಮುಜಗರ, ಹಿಂಜರಿಕೆ ಹಾಗೂ ಸಂಘಟನೆ ಕೊರತೆ ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಜನರೂ ಅನುದಾನರಹಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳು ಇದ್ದಾರೆ. ಇವರದು ಕುಟುಂಬಗಳಿವೆ.  ಹೆಂಡತಿ, ಮಕ್ಕಳು ಇದ್ದಾರೆ. ಇವರೂ ಲಾಕ್ ಡೌನ್ ಪೂರ್ವದಲ್ಲಿ ಪಡೆಯುವ ಸಂಬಳ ಪ್ರತಿ ತಿಂಗಳಿಗೆ ಅಂದಾಜು ರೂ. 5ಸಾವಿರದಿಂದ 15 ಸಾವಿರ ಒಳಗೆ ಇರಬಹುದು. ವರ್ಷದ ಕೂಲಿ ಲೆಕ್ಕ ಹಾಕಿದರೆ ದಿನಕ್ಕೆ 200 ರೂಪಾಯಿ ಆಗಬಹುದು. ಆದರೆ ಬಹುಷ ಶೇ.85ರಷ್ಟು ಖಾಸಗಿ ಸಂಸ್ಥೆಗಳು ವರ್ಷದ ಮೂರು ತಿಂಗಳ ಅಲ್ಲಿಯ ಸಿಬ್ಬಂದಿಗೆ ಸಂಬಳ ನೀಡುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಈ ಲಾಕ್ ಡೌನ್ ಪರಿಸ್ಥಿತಿಯಿಂದ ಈ ಶಿಕ್ಷಿತ ವರ್ಗ ಪಾತಾಳಕ್ಕೆ ನುಕ್ಕಿದ ಆತಂಕ ಮನೆ ಮಾಡಿದೆ. ಹಲವರಿಗೆ ಕುಟುಂಬದ ಕನಿಷ್ಟತಮ ಸೌಕರ್ಯಗಳು ಪೂರೈಕೆ ಮಾಡಲು ಸಾಧ್ಯವಾಗಲಾರದು. 10-15 ವರ್ಷದಿಂದ ಬೋಧನೆಯೇ ಶ್ರೇಷ್ಟ ಧರ್ಮ ಎಂದು ನಂಬಿಕೊಂಡು ಬೇರೆ ದುಡಿಮೆ, ಆದಾಯ ಇಲ್ಲದೆ ಬದುಕುವ ಸಿಬ್ಬಂದಿಗಳ ಬದುಕು ಬೀದಿಗೆ ಬರಲಿದೆ. ತಮ್ಮೂರಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೂ ಹೋಗುವಂತಿಲ್ಲ. ಬೇರೆ ಕೆಲಸ ಮಾಡಬೇಕಾದರೆ ಎಲ್ಲಡೆ ಲಾಕ್ ಡೌನ್ ಭಯ, ಕೊರೊನಾ ಹರಡುವಿಕೆ ಆತಂಕ.

ಇಂತಹ ಸಂದರ್ಭದಲ್ಲಿ  ಖಾಸಗಿ ಸಂಸ್ಥೆಗಳ ಶಾಲಾ ಕಾಲೇಜುಗಳ ಇನ್ನು ಅಗಸ್ಟ್ ವರೆಗೆ ಆರಂಭ ಆಗುವದಿಲ್ಲ. ಆರಂಭವಾದರೂ ಆ ಸಂಸ್ಥೆ ಮೂಲ ವಿದ್ಯಾರ್ಥಿಗಳ  ಡೋನೆಷನ್ ಅದು  ಈ ಬಾರಿ ಪಾಲಕರೂ ಕಟ್ಟುವಲ್ಲಿ ವಿಳಂಭವಾದರೆ ಅಲ್ಲಿಯ ಸಿಬ್ಬಂದಿಗಳ ಕಡಿತ, ಸಂಬಳ ಇಲ್ಲದೆ 6 ತಿಂಗಳ ದುಡಿಯುವ ಅನಿವಾರ್ಯತೆ ಎದುರಾಗಬಹುದು. ಇಂತಹ ವಿಷಮ ಸ್ಥಿತಿಯಲ್ಲಿ ಶಿಕ್ಷಕರ, ಪದವಿಧರ ಕ್ಷೇತ್ರದಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳು, ಹೋರಾಟಗಾರರು ಮತ್ತು ಶಿಕ್ಷಣತಜ್ಜ್ಞರಿಗೆ ಈ ವರ್ಗದ ಗೋಳು ಕಾಣವದಿಲ್ಲ, ಕೇಳದಿರವದು ದುರಾದೃಷ್ಟಕರವಾದದು.

ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಶಾಸಕರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ ನಡೆಸವರೂ ಯಾರೂ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರ, ಸಿಬ್ಬಂದಿಗಳಿಗೆ ಈ ಲಾಕ್ ಡೌನ್ ನಡುವೆ ಕನಿಷ್ಠ ಪರಿಹಾರ ಧನ, ಜೀವನಾವಶ್ಯಕ ಸಾಮಗ್ರಿ ವಿತರಣೆ ಮಾಡುವ ಕಡೆ ಗಮನ ಹರಿಸಲಿ. ಇಂತಹ ಆಗ್ರಹ, ಮನವಿಯೂ ನಿಮ್ಮಲ್ಲಿ ಪ್ರತಿ ಸ್ಪಂದಿಸುವ ಕಾಳಜಿ ಮೂಡಿಸಲಿ, ಈ ವರ್ಗದ ಪರವಾಗಿ ಧ್ವನಿ ಎತ್ತುವ, ಉನ್ನತಮಟ್ಟದಲ್ಲಿ ಚರ್ಚೆಗೆ ಅವಕಾಶ ನೀಡಲಿ ಎಂದು ಆಶಿಸುತ್ತ ನೊಂದ, ಸಂಕಟದಲ್ಲಿರುವ ಎಲ್ಲ ಖಾಸಗಿ ಶಾಲಾ ಕಾಲೇಜುಗಳ ಸಿಬ್ಬಂದಿ ಪರವಾಗಿ ಮನವಿ ಮಾಡಲಾಗಿದೆ.