ಕೋಚ್ ಆಗಲಿದ್ದಾರೆ ಯುವರಾಜ್ ಸಿಂಗ್

ಬೆಂಗಳೂರು, ನವೆಂಬರ್ 19, 2019 (www.justkannada.in): ಯುವರಾಜ್ ಸಿಂಗ್ ಇದೀಗ ದುಬೈ T10 ಲೀಗ್​ನಲ್ಲಿ ಮರಾಠ ಅರೇಬಿಯನ್ಸ್​ ತಂಡದ ಪರ ಬ್ಯಾಟ್​ ಬೀಸುತ್ತಿದ್ದಾರೆ.

ವರ್ಷದಲ್ಲಿ 3-4 ತಿಂಗಳುಗಳ ಕಾಲ ವಿದೇಶಿ ಲೀಗ್​ಗಳನ್ನ ಆಡಲು ನಿರ್ಧರಿಸಿರುವ ಯುವರಾಜ್, ಕ್ರಿಕೆಟ್​ನಂತರ ಯುವಿ ಏನ್ ಮಾಡ್ತಾರೆ ಅನ್ನೋದನ್ನ ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.

ಎರಡು ವರ್ಷಗಳ ಕಾಲ ವಿದೇಶಿ ಲೀಗ್​ಗಳಲ್ಲಿ ಕಾಣಿಸಿಕೊಳ್ಳಲಿರುವ ಯುವಿ, ನಂತರ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರಂತೆ. ಈ ವಿಷಯವನ್ನು ಸ್ವಯಃ ಅವರೇ ಹೇಳಿದ್ದಾರೆ.