ಸರಕಾರಿ ಶಾಲೆ ಮಕ್ಕಳೊಂದಿಗೆ ಕಾಲ ಕಳೆದ ಪವರ್ ಸ್ಟಾರ್ !

ಬೆಂಗಳೂರು, ನವೆಂಬರ್ 19, 2019 (www.justkannada.in): ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊಂಚ ಕಾಲ ಕಳೆದಿದ್ದಾರೆ.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಪುನೀತ್ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ.

ಎಲ್ಲಾ ಮಕ್ಕಳು ಖುಷಿಯಿಂದ ತೆರೆ ಮೇಲೆ ನೋಡ್ತಿದ್ದ ನಟನನ್ನ ಕಣ್ಣೆದುರು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರ, ಮಾತಿನ ಭಾಗಗಳ ಚಿತ್ರೀಕರಣದ ಕಡೇ ಹಂತಕ್ಕೆ ತಲುಪಿದೆ.