ವಿರಾಟ್ ಕೊಹ್ಲಿ ವರ್ಕ್‌ಔಟ್ ವಿಡಿಯೊ‌ ವೈರಲ್

ಬೆಂಗಳೂರು, ನವೆಂಬರ್ 19, 2019 (www.justkannada.in): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೊ‌ ವೈರಲ್ ಆಗಿದೆ.

ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮೊದಲು ವರ್ಕ್‌ಔಟ್ ಮಾಡುತ್ತಿರುವ ಭಾರತದ ‌ಕ್ರಿಕೆಟ್ ತಂಡದ ನಾಯಕ, ಈ ವಿಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ

ಇದಕ್ಕೆ ಯಾವುದೇ ರಜೆಯಿಲ್ಲ ಎನ್ನುವ ಕಾಪ್ಶನ್ ಸಹ ನೀಡಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಬಂದಿವೆ.