ಕ್ರಿಕೆಟ್ ಬೆಟ್ಟಂಗ್ ದಂಧೆಯಲ್ಲಿ ತೊಡಗಿದ್ದ 7 ಮಂದಿ ಬಂಧನ…

ಉತ್ತರ ಕನ್ನಡ,ಅಕ್ಟೋಬರ್,11,2020(www.justkannada.in): ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 7 ಮಂದಿಯನ್ನ ಭಟ್ಕಳ ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಅಬು ಶೇಖ್ (43), ಜಾಪರ್ ಹುಸೈ‌ನ್ (42), ಅಬಿದ್ ಅಬಿದಿನ್ (33), ವಾಸೀಮ್ ಶಬ್ಬರ್ (43), ಮಹಮದಸಾಬಿ ಖಾದಿರ್ (32), ಸಾಹಿರ್ ಭಾಷಾ(39), ಮಹಮದ್ ಸಾಕಿಬ್ (43) ಬಂಧಿತ ಆರೋಪಿಗಳು.  ಬಂಧಿತರ ಬಳಿ ಇದ್ದ 50,100 ರೂ. ನಗದು ಹಾಗೂ ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.cricket-bettang-7-arrested-bhatkala

ಬಂಧಿತರು ಭಟ್ಕಳದ ಜಾಲಿರೋಡ್ ಬಳಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಈ ವೇಳೆ ಇನ್ಸ್ ಪೆಕ್ಟರ್ ನಿಶ್ಚಲ್ ಕುಮಾರ್ ನೇತ್ರತ್ವದಲ್ಲಿ  ದಾಳಿ ನಡೆಸಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರನ್ನ ಬಂಧಿಸಲಾಗಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Cricket Bettang-7 arrested -bhatkala