Sunday, September 13, 2026

BDA Apartments

ನಟಿ ಕಂಗನಾ ರಣಾವತ್’ಗೆ ಕೊರೊನಾ ಸೋಂಕು BDA JK_Adv BDA Adv
Home Cinema ನಟಿ ಕಂಗನಾ ರಣಾವತ್’ಗೆ ಕೊರೊನಾ ಸೋಂಕು

ನಟಿ ಕಂಗನಾ ರಣಾವತ್’ಗೆ ಕೊರೊನಾ ಸೋಂಕು

ಬೆಂಗಳೂರು, ಮೇ 08, 2021 (www.justkannada.in): ಬಾಲಿವುಡ್ ನಟಿ ಕಂಗನಾ ರಣಾವತ್‍ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕು ತಗುಲಿರುವ ಕುರಿತು ಫೇಸ್ಬುಕ್‍ನಲ್ಲಿ ಕಂಗನಾ ಖಚಿತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನನಗೆ ಸುಸ್ತು, ಅಶಕ್ತಿ ಹಾಗೂ ಕಣ್ಣುಗಳು ಉರಿಯುತ್ತಿದ್ದವು.ಕೋವಿಡ್ ಟೆಸ್ಟ್ ಮಾಡಿಸಿದ ವೇಳೆ ಸೋಂಕು ದೃಢಪಟ್ಟಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಈ ವೈರಸ್ ನನ್ನ ದೇಹದೊಳಗೆ ಹೊಕ್ಕಿಕ್ಕೊಳ್ಳುತ್ತೆ ಎಂದು ಭಾವಿಸಿರಲಿಲ್ಲ. ಇದೀಗ ಪಾಸಿಟಿವ್ ಬಂದಿದ್ದು, ಇದನ್ನು ಸರ್ವನಾಶ ಮಾಡುತ್ತೇನೆ ಎಂದಿದ್ದಾರೆ ಕ್ವೀನ್ ಕಂಗನಾ!