Monday, September 28, 2026

BDA Apartments

ಮೈಸೂರಿನಲ್ಲಿ ಲಾಕ್ಡೌನ್ ಸಡಿಲಿಕೆ ನಿಯಮಗಳು ನಾಳೆಯಿಂದಲೇ ಜಾರಿಗೆ BDA JK_Adv BDA Adv
Home Front Page ಮೈಸೂರಿನಲ್ಲಿ ಲಾಕ್ಡೌನ್ ಸಡಿಲಿಕೆ ನಿಯಮಗಳು ನಾಳೆಯಿಂದಲೇ ಜಾರಿಗೆ.

ಮೈಸೂರಿನಲ್ಲಿ ಲಾಕ್ಡೌನ್ ಸಡಿಲಿಕೆ ನಿಯಮಗಳು ನಾಳೆಯಿಂದಲೇ ಜಾರಿಗೆ.

ಮೈಸೂರು,ಜೂನ್,25,2021(www.justkannada.in): ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲಾಕ್ ಡೌನ್ ಮುಂದುವರೆಸಲಾಗಿದೆ. ಈ ಮಧ್ಯೆ ಇದೀಗ ಕೋವಿಡ್ ಲಾಕ್ ಡೌನ್  ನಿರ್ಬಂಧದಿಂದ ಮೈಸೂರಿಗೆ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿದೆ. ಮೈಸೂರಿನಲ್ಲಿ ಲಾಕ್ಡೌನ್ ಸಡಿಲಿಕೆ ನಿಯಮಗಳು ನಾಳೆಯಿಂದಲೇ ಜಾರಿಗೆ ಬರಲಿದೆ.

jk

ಈ ಸಂಬಂಧ  ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್. ಮೈಸೂರು ಜಿಲ್ಲೆಯನ್ನು ಸರ್ಕಾರ ಕೆಟಗಿರಿ 3ರಿಂದ ಮೇಲ್ಸರ್ಜೆಗೇರಿಸಿ ಕೆಟಗೆರಿ 2ಕ್ಕೆ ಸೇರ್ಪಡೆ ಮಾಡಲಾಗಿದೆ. ಇದರ ಪರಿಣಾಮ ಅನ್ ಲಾಕ್ 1 ರಂತೆ ಕೆಟಗಿರಿ 2ಕ್ಕೆ ಅನ್ವಯಿಸಿರುವ ನೀತಿ ನಿಯಮಗಳು ಜಾರಿಯಾಗಲಿದೆ. ಶೇ 10ಕ್ಕಿಂತ ಜಾಸ್ತಿ ಇದ್ದ ಪಾಸಿಟಿವಿಟಿ ದರ ಶೇ5-10ರೊಳಗೆ ಬಂದಿದೆ. ಕೈಗಾರಿಕೆ, ಉದ್ದಿಮೆಗಳು ಶೇ 50ರಷ್ಟು ಕಾರ್ಮಿಕರು‌ ಕೆಲಸ ಮಾಡಲು ಅವಕಾಶ ನೀಡಲಾಗಿದೆ, ಗಾರ್ಮೆಂಟ್ಸ್ ಗಳಿಗೆ ಶೇ 30ರಷ್ಟು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ಫಾಸ್ಟ್‌ ಫುಡ್, ಮದ್ಯದಂಗಡಿಗಳು ಸಹ ಮಧ್ಯಾಹ್ನ 2 ಗಂಟೆವರೆಗೆ ಅನುಮತಿ ನೀಡಲಾಗಿದೆ. ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಗಳಲ್ಲಿ ಪ್ರಯಾಣಿಸಲು ಕೇವಲ ಮೂವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.

ಮದುವೆ ಕಾರ್ಯಗಳಿಗೆ 40 ಮಂದಿಗೆ ಅವಕಾಶ ನೀಡಲಾಗಿದೆ. ಮದುವೆ ಕಾರ್ಯಗಳಿಗೆ ತಹಶಿಲ್ದಾರರಿಂದ ಅನುಮತಿ ಪಡೆಯಬೇಕು. ತಹಶೀಲ್ದಾರರೇ ಪಾಸ್  ನೀಡಲಿದ್ದಾರೆ ಎಂದು ಬಗಾದಿ ಗೌತಮ್ ಮಾಹಿತಿ ನೀಡಿದರು.

ಎಲ್ಲಾ ವಸ್ತುಗಳ ಹೋಂ ಡಿಲಿವೆರಿಗೆ 24/7 ಅನುಮತಿ ನೀಡಲಾಗಿದ್ದು, ನಿರ್ಮಾಣ ಕಾಮಗಾರಿ ವಸ್ತುಗಳ ಮಾರಾಟಕ್ಕೂ ಮದ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 5 ರಿಂದ 10 ರವರೆಗೆ ವಾಕಿಂಗ್ ಜಾಗಿಂಗ್‌ ಮಾಡಬಹುದು. ಸರ್ಕಾರಿ ಕಚೇರಿಗಳಲ್ಲಿ 50% ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸಬಹುದು. ಕೌಶಲ್ಯ ತರಭೇತಿಯನ್ನ ಕೋವಿಡ್ ನಿಯಮದೊಂದಿಗೆ ನಡೆಸಬಹುದು ಎಂದು ಡಿಸಿ ಬಗಾದಿ ಗೌತಮ್ ತಿಳಿಸಿದರು.

ಇನ್ನು ಸಂಜೆ 7 ಘಂಟೆಯಿಂದ ಬೆಳಿಗ್ಗೆ 6 ರವೆರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರುತ್ತದೆ ವೀಕೆಂಡ್ ಕರ್ಫ್ಯೂ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಡಿಸಿ ಬಗಾದಿ ಗೌತಮ್ ತಿಳಿಸಿದರು.

Key words: Covid- Lockdown –Restriction- Little Relax – Cultural City – Mysore.