Tuesday, September 22, 2026

BDA Apartments

Tragic Raichur Accident Two Boys BDA JK_Adv BDA Adv
Home Crime ಮೈಸೂರಿನಲ್ಲಿ ಜೋಡಿ ಕೊಲೆ ಪ್ರಕರಣ: ಆರೋಪಿ ಅಂದರ್.

ಮೈಸೂರಿನಲ್ಲಿ ಜೋಡಿ ಕೊಲೆ ಪ್ರಕರಣ: ಆರೋಪಿ ಅಂದರ್.

ಮೈಸೂರು,ಅಕ್ಟೋಬರ್,24,2021(www.justkannada.in):  ಮೈಸೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ಧ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆ.ಜಿ ಕೊಪ್ಪಲಿನ ನಿವಾಸಿ ಸಾಗರ್ ಬಂಧಿತ ಆರೋಪಿ .ನಂಜನಗೂಡು ಬಳಿ ಸಾಗರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಾಗರ್ ತನ್ನ ತಂದೆ ಶಿವಪ್ರಕಾಶ್ ಮತ್ತು ಶಿವಪ್ರಕಾಶ್ ಪ್ರೇಯಸಿ ಲತಾರನ್ನ ಕೊಲೆ ಮಾಡಿದ್ದನು. ಶಿವಪ್ರಕಾಶ್ ಹಾಗೂ ಲತಾರನ್ನ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು.  ಮೈಸೂರಿನ ಶ್ರೀನಗರದಲ್ಲಿ ಈ ಘಟನೆ ನಡೆದಿತ್ತು.

ಈ ಕುರಿತು ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ಸಾಗರ್ ಬಂಧಿಸಲಾಗಿದ್ದು, ಕೊಲೆಗೆ ಪ್ರಮುಖ ಕಾರಣದ ಕುರಿತು ಪೊಲೀಸರು ಸಾಗರ್ ನನ್ನು ವಿಚಾರಣೆಗೊಳಪಡಿಸಿದ್ದಾರೆ.

Key words: Couple -murder case –Mysore-arrest – accused