ಹೆಚ್.ಡಿಕೆ ಸೂಟ್ ಕೇಸ್ ತೆಗೆದುಕೊಂಡು ಅಭ್ಯರ್ಥಿ ಹಾಕಿದ್ದಾರೆ: ನನ್ನ ತಂಟೆಗೆ ಬಂದ್ರೆ ಅವರದ್ಧೂ ಬಿಚ್ಚಿಡುತ್ತೇನೆ- ಶಾಸಕ ಜಮೀರ್ ಹೊಸಬಾಂಬ್.

ವಿಜಯಪುರ,ಅಕ್ಟೋಬರ್,24,2021(www.justkannada.in): ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಹಿನ್ನೆಲೆ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿಯಿಂದ ಸೂಟ್ ಕೇಸ್ ತೆಗೆದುಕೊಂಡು ಮುಸಲ್ಮಾನ ಅಭ್ಯರ್ಥಿ ಹಾಕಿದ್ದಾರೆ. ಜೆಡಿಎಸ್ ಸೂಟ್ ಕೇಸ್ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೊಸಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ಹೆಚ್.ಡಿ ಕುಮಾರಸ್ವಾಮಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಬಿಜೆಪಿಯಿಂದ ಸೂಟ್ ಕೇಸ್ ಪಡೆದು ಅಭ್ಯರ್ಥಿ ಹಾಕಿದ್ದಾರೆ. ಬಸವಕಲ್ಯಾಣದಲ್ಲಿ 10 ಕೋಟಿ  ತೆಗೆದುಕೊಂಡು ಅಭ್ಯರ್ಥಿ ಹಾಕಿದ್ರು. ಸಿಂದಗಿಯಲ್ಲಿ ಬಿಜೆಪಿ ಗೆಲ್ಲಲು ಸಹಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಹೆಚ್.ಡಿ ಕುಮಾರಸ್ವಾಮಿ ಬೆಳೆಸಿದ್ಧು ನಾನು. ನನ್ನ ತಂಟೆಗೆ ಬಂದ್ರೆ ಹೆಚ್.ಡಿ ಕುಮಾರಸ್ವಾಮಿ ಅವರದ್ಧನ್ನು ಬಿಚ್ಚಿಡುತ್ತೇನೆ. ನಾನು ಶಾಸಕ ಆಗಿದ್ದು ಹೆಚ್.ಡಿ ಕುಮಾರಸ್ವಾಮಿಯಿಂದಲ್ಲ. ಹೆಚ್.ಡಿ ದೇವೇಗೌಡರಿಂದ ನಾನು ಶಾಸಕನಾಗಿದ್ದೆ. ಹೆಚ್ ಡಿ ದೇವೇಗೌಡರ ಋಣ ನನ್ನ ಮೇಲೆ ಇದೆ ಎಂದರು.

ಹಣಕ್ಕಾಗಿ  ಹೆಚ್.ಡಿ ಕುಮಾರಸ್ವಾಮಿ ಅಲ್ಪ ಸಂಖ್ಯಾತರನ್ನ ಬಲಿ ಕೊಡ್ತಿದ್ದಾರೆ. ಬ್ರದರ್ ಬ್ರದರ್ ಎಂದು ಕತ್ತನ್ನೆ ಕೊಯ್ತಾನೆ. ಅಲ್ಪಸಂಖ್ಯಾತರನ್ನ ಮುಗಿಸಿದ್ದು ಹೆಚ್.ಡಿ ಕುಮಾರಸ್ವಾಮಿ ಎಂದು ಏಕವಚನದಲ್ಲಿಯೇ ಶಾಸಕ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.

Key words: JDS-HD kumaraswamy- Candidate -suit case-mla- jameer ahamad khan