Friday, October 2, 2026

BDA Apartments

ಆಕ್ಷೇಪಾರ್ಹ ಹೇಳಿಕೆ ; ನ್ಯಾಯಾಧೀಶರು ವಿಷಾದ BDA JK_Adv BDA Adv
Home Front Page ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ: ಒಂದೇ ದಿನದಲ್ಲಿ 7240 ಕೋವಿಡ್ ಪ್ರಕರಣಗಳು ಪತ್ತೆ.

ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ: ಒಂದೇ ದಿನದಲ್ಲಿ 7240 ಕೋವಿಡ್ ಪ್ರಕರಣಗಳು ಪತ್ತೆ.

ಬೆಂಗಳೂರು,ಜೂನ್,9,2022(www.justkannada.in): ದೇಶದಲ್ಲಿ ಕಳೆದೊಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ನಡುವೆ ಕಳೆದ 24 ಗಂಟೆಗಳಲ್ಲಿ 7240 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು ಕಳೆದ 24 ಗಂಟೆಗಳಲ್ಲಿ 7240 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಅವಧಿಯಲ್ಲಿ ಕೊರೊನಾದಿಂದ 8 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 32,498ಕ್ಕೆ ಏರಿಕೆಯಾಗಿದೆ.

ಈವರೆಗೆ 4,26,40,301 ಮಂದಿ ಕೊರೋನಾದಿಂದ ಡಿಸ್ಚಾರ್ಜ್ ಆಗಿದ್ದಾರೆ, ಇದುವರೆಗೆ ಕೊರೊನಾಗೆ 5,24,723 ಮಂದಿ  ಸಾವನ್ನಪ್ಪಿದ್ದಾರೆ. ಕೊರೊನಾ ಲಸಿಕೆಯ ಪರಿಣಾಮ ಸಾವಿನ ಪ್ರಮಾಣ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 15,43,748 ಮಂದಿ ಕೊರೊನಾ ಲಸಿಕೆ ನೀಡಲಾಗಿದ್ದು, ಇದುವರೆಗೆ 1,94,59,81,691 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

Key words: country-7240 covid cases -detected – single day.