Saturday, September 19, 2026

BDA Apartments

ಹಿಜಾಬ್ ವಿವಾದದ ನಡುವೆ ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ BDA JK_Adv BDA Adv
Home Front Page ಹಿಜಾಬ್ ವಿವಾದದ ನಡುವೆ ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ.

ಹಿಜಾಬ್ ವಿವಾದದ ನಡುವೆ ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ.

ಬೆಂಗಳೂರು,ಜೂನ್,9,2022(www.justkannada.in):  ಹಿಜಾಬ್ ವಿವಾದದ ನಡುವೆ ಇಂದಿನಿಂದ ಪಿಯು ಕಾಲೇಜುಗಳು ಆರಂಭವಾಗಿದ್ದು ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲಿಸುವಂತೆ ಸೂಚನೆ ನೀಡಲಾಗಿದೆ.

2022-23ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು,  ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಇಂದಿನಿಂದ ಆರಂಭವಾಗಿವೆ. ಕಳೆದ 2 ವರ್ಷ ಕೋವಿಡ್ ಕಾರಣದಿಂದ ತರಗತಿ ಸರಿಯಾಗಿ ನಡೆದಿಲ್ಲ. ಈ ವರ್ಷ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವ ಗುರಿ ಶಿಕ್ಷಣ ಇಲಾಖೆಗಿದೆ. ಈ ಭಾರಿ ದಾಖಲೆ ಪ್ರಮಾಣದಲ್ಲಿ SSLC ವಿದ್ಯಾರ್ಥಿಗಳು ಪಾಸ್ ಆಗಿರುವುದರಿಂದ ಪಿಯು ಕಾಲೇಜುಗಳ ದಾಖಲೆಯ ದಾಖಲಾತಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ತರಗತಿ ಆರಂಭಕ್ಕೆ ಪಿಯು ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದೆ.ಹಿಜಾಬ್ ವಿವಾದದ ನಡುವೆ ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ pu college

ಪದವಿಪೂರ್ವ ಕಾಲೇಜುಗಳಿಗೂ ಸಮವಸ್ತ್ರ ಕಡ್ಡಾಯ ಮಾಡಲಾಗಿದ್ದು,  ಹಿಜಾಬ್ ಧರಿಸಿ ಬಂದರೆ ತರಗತಿಗೆ ಅನುಮತಿ ಇಲ್ಲ. ಹೈಕೋರ್ಟ್ ಆದೇಶ ಪಾಲಿಸಲು ಸರ್ಕಾರ ಸೂಚನೆ ನೀಡಿದೆ.

Key words: PU colleges- restart -today -hijab -controversy