Wednesday, August 19, 2026

BDA Apartments

Home Front Page ಭ್ರಷ್ಟ ಬಿಜೆಪಿಯ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು- ತಿರುಗೇಟು ಕೊಟ್ಟ ಕಾಂಗ್ರೆಸ್

ಭ್ರಷ್ಟ ಬಿಜೆಪಿಯ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು- ತಿರುಗೇಟು ಕೊಟ್ಟ ಕಾಂಗ್ರೆಸ್

ಬೆಂಗಳೂರು ಅಕ್ಟೋಬರ್,16,2023(www.justkannada.in):  ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂ ಆಗಿ ಮಾಡಿಕೊಂಡಿದೆ. ಪಂಚರಾಜ್ಯ ಚುನಾವಣೆಗೆ ಹಣ ಸಾಗಿಸುತ್ತಿದೆ  ಎಂದು ಆರೋಪಿಸಿರುವ ರಾಜ್ಯ ಬಿಜೆಪಿಗೆ ಇದೀಗ ಕಾಂಗ್ರೆಸ್ ಘಟಕ ಟ್ವಿಟ್ ಮಾಡಿ ತಿರುಗೇಟು ನೀಡಿದೆ.

ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್ ಘಟಕ, ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 70 ರಿಂದ 80 ಕೋಟಿ, ಬಿಜೆಪಿ ಟಿಕೆಟ್​ಗೆ 7 ಕೋಟಿ. ಇಂತಹ ಭ್ರಷ್ಟ ಬಿಜೆಪಿಯ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು! ಕಲೆಕ್ಷನ್ ಗಿರಾಕಿ ಮೋದಿ ಕರ್ನಾಟಕಕ್ಕೆ ಮೂರು ದಿನಕ್ಕೊಮ್ಮೆ ಬಂದಿದ್ದು ಕಲೆಕ್ಷನ್ ಮಾಡುವುದಕ್ಕಾಗಿಯೇ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.

Key words:  corrupt -BJP -high command – Karnataka – reserve bank – Congress