Thursday, September 17, 2026

BDA Apartments

ದೇಶದಲ್ಲಿ 71 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ… BDA JK_Adv BDA Adv
Home Front Page  ದೇಶದಲ್ಲಿ 71 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ…

 ದೇಶದಲ್ಲಿ 71 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ…

 ನವದೆಹಲಿ,ಅಕ್ಟೋಬರ್ 12,2020(www.justkannada.in):  ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 66,732 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 71 ಲಕ್ಷ ಗಡಿ ದಾಟಿದೆ.

ಕಳೆದ 24 ಗಂಟೆಯಲ್ಲಿ 66,732 ಜನರಲ್ಲಿ  ಕೋವಿಡ್-19 ಕಾಣಿಸಿಕೊಳ್ಳುವ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 71,20,539 ಕ್ಕೆ ಏರಿಕೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು ಒಂದೇ ದಿನದಲ್ಲಿ  ಕೊರೋನಾ ಸೋಂಕಿಗೆ 816 ಜನರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,09,150ಕ್ಕೆ ಏರಿಕೆಯಾಗಿದೆ.coronavirus-number-crossing-71-lakh-country

ದೇಶದಲ್ಲಿ 8,61,853 ಕೊರೋನಾ ಸಕ್ರಿಯ ಪ್ರಕರಣಗಳಿದ್ದು, 61,49,536 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಇತ್ತೀಚೆಗೆ ಒಂದೇ ದಿನದಲ್ಲಿ ಕೋವಿಡ್ ಗೆ ತುತ್ತಾಗುತ್ತಿದ್ದವರ ಸಂಖ್ಯೆ ದೇಶದಲ್ಲಿ 80 ರಿಂದ 90 ಸಾವಿರ ಗಡಿ ದಾಟುತ್ತಿತ್ತು.

 

Key words: Coronavirus -number crossing -71 lakh – country