ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮ ಸೀಲ್ ಡೌನ್…….

ಮೈಸೂರು,ಜೂ,22,2020(www.justkannada.in):  ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮದಲ್ಲಿ ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಇಡೀ ಗ್ರಾಮವನ್ನ ಸೀಲ್ ಡೌನ್ ಮಾಡಲಾಗಿದೆ.

ಗ್ರಾಮದ 26 ವರ್ಷದ ಯುವಕನಿಗೆ ಕೋರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ರಮ್ಮನಹಳ್ಳಿ ಗ್ರಾಮ ಸೀಲ್ ಡೌನ್ ಮಾಡಲಾಗಿದ್ದು ಗ್ರಾಮದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.

ಯುವಕ ಲಾಕ್ ಡೌನ್ ತೆರವಿನ ನಂತರ ರಾಮಕೃಷ್ಣ ನಗರ ಹಾಗೂ ಕುವೆಂಪು ನಗರದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದನು. ಸದ್ಯ ಸೋಂಕಿತ ಯುವಕನನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು ಈತನೊಂದಿಗೆ ಪ್ರಥಮ ಸಂಪರ್ಕ ಹೊಂದಿದ ಪತ್ನಿ, ಒಂದು ವರ್ಷದ ಮಗು, ಅಜ್ಜಿ, ತಾತ, ಹಾಗೂ ಸಹೋದರಿಯ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.

ಇನ್ನು ಪ್ರಕರಣದಲ್ಲಿ  ರಮ್ಮಾನಹಳ್ಳಿ ಯಲ್ಲಿ ಕ್ಲಿನಿಕ್ ಇಟ್ಟಿರುವ ಸರ್ಕಾರಿ ವೈದ್ಯ ಯತೀಶ್  ಅವರು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊರೋನಾ ಸೋಂಕಿತ ಯುವಕ ಆಟೋ ರಿಕ್ಷಾದಲ್ಲಿ ಸಣ್ಣ ಅಪಘಾತ ಮಾಡಿಕೊಂಡು ಡಾಕ್ಟರ್ ಯತೀಶ್ ಬಳಿ ಚಿಕಿತ್ಸೆ ಪಡೆದುಕೊಂಡಿದ್ದನು.corona virus- mysore-Rummanahalli –village- seal down

ಇದಾದ ಮೂರು ದಿನಗಳ ನಂತರ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಮತ್ತೆ ಅದೇ ವೈದ್ಯರ ಬಳಿ ತೆರಳಿದ್ದಾನೆ. ತೀವ್ರ ಜ್ವರ, ಉಸಿರಾಟದ ತೊಂದರೆ ಯಂತಹ ಕೊವಿಡ್ ಸೋಂಕು ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ನೀಡಬಾರದು ಎಂಬ ನಿಯಮ ಇದೆ. ಆದರೆ ಡಾಕ್ಟರ್ ಯತೀಶ್ ಆರೋಗ್ಯ ಇಲಾಖೆ ನಿಯಮ ಮೀರಿ ಕೋವಿಡ್ ಸೊಂಕಿತನಿಗೆ ಸಾಮಾನ್ಯ ಜ್ವರಕ್ಕೆ ನೀಡುವ ಚಿಕಿತ್ಸೆ ನೀಡಿದ್ದಾರೆ. ಜ್ವರ ಕಡಿಮೆಯಾಗದ ಹಿನ್ನಲೆಯಲ್ಲಿ ಸೋಂಕಿತ ಯುವಕ ಮತ್ತೆ ಅದೇ ವೈದ್ಯರ ಬಳಿ ತೆರಳಿ ಕೇಳಿದ್ದಾನೆ. ಗ್ಯಾಸ್ಟ್ರಿಕ್ ಇರಬಹುದು ಏನೂ ಆಗಲ್ಲ ಎಂದು ಮತ್ತೆ ಇಂಜೆಕ್ಷನ್ ನೀಡಿ ಡಾಕ್ಟರ್ ಯತೀಶ್ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.

ಇಷ್ಟಾದರೂ ಜ್ವರ ಕಡಿಮೆಯಾಗದ ಹಿನ್ನಲೆಯಲ್ಲಿ ಸೋಂಕಿತ ಮೈಸೂರು ನಗರ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಇರುವ ಸೀತಾರಂಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.  ಅಲ್ಲಿಯೂ ಗುಣವಾಗದ ಹಿನ್ನಲೆಯಲ್ಲಿ  ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಈತ ಹಂಚ್ಯಾ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಭೇಟಿ ನೀಡಿದ್ದಾನೆ.  ಅಲ್ಲಿನ ಡಾಕ್ಟರ್ ರವೀಂದ್ರ ಅನುಮಾನ ಬಂದು ಯುವಕನಿಗೆ ಕೊವಿಡ್ ಪರೀಕ್ಷೆ ಮಾಡಿಸುವಂತೆ ಸೂಚಿಸಿದ್ದಾರೆ.

ಅದರಂತೆ ಪರೀಕ್ಷೆಗೆ ಒಳಗಾದ ಯುವಕನಿಗೆ ಕೋರೋಣ ಸೋಂಕು ಇರುವುದು ದೃಢಪಟ್ಟಿದೆ.  ಇದೀಗ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಸೋಂಕಿತ ಭೇಟಿ ನೀಡಿದ್ದ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿರುವ ರೋಗಿಗಳಲ್ಲಿ ಸೋಂಕಿನ ಭಯ ಕಾಡುತ್ತಿದೆ.

Key words: corona virus- mysore-Rummanahalli –village- seal down