Sunday, August 9, 2026

BDA Apartments

Home Crime ಕೊರೊನಾ ಪಾಸಿಟಿವ್: ಹುಣಸೂರು ತಾಲೂಕಿನ ವ್ಯಕ್ತಿ ನೇಣಿಗೆ ಶರಣು

ಕೊರೊನಾ ಪಾಸಿಟಿವ್: ಹುಣಸೂರು ತಾಲೂಕಿನ ವ್ಯಕ್ತಿ ನೇಣಿಗೆ ಶರಣು

ಮೈಸೂರು, ಮೇ 23, 2021 (www.justkannada.in): ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹುಣಸೂರು ತಾಲ್ಲೂಕಿನ ಹಂದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕುಮಾರ್ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕಳೆದ ಎರಡು ದಿನಗಳ ಹಿಂದೆ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಇಂದು ಪಾಸಿಟಿವ್ ಎಂದು ಮೆಸೆಜ್ ಬರುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಮೀನನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.accused-harassment-husband-wife-suicide-kr-nagara