ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರಗೆ ಕೊರೋನಾ ಸೋಂಕು ದೃಢ….

ಬೀದರ್,ನವೆಂಬರ್,5,2020(www.justkannada.in): ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರಗೆ ಕೊರೋನಾ ಸೋಂಕು ತಗುಲಿದೆ.jk-logo-justkannada-logo

ಈ ಕುರಿತು ಬಂಡೆಪ್ಪ ಖಾಶೆಂಪುರ ಅವರೇ ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ  ವೈದ್ಯಕೀಯ  ಪರೀಕ್ಷೆ ಮಾಡಿಸಿದಾಗ ನನಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲ, ಆದರೂ   ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ 4-5 ದಿನಗಳಿಂದ ನನ್ನ ನೇರ ಸಂಪರ್ಕ ಹೊಂದಿರುವ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಿ ಎಂದು ಬಂಡೆಪ್ಪ ಕಾಶೆಂಪೊರ ಮನವಿ ಮಾಡಿದ್ದಾರೆ. corona-positive-jds-mla-bandeppa-khasempura

ತಾಯಿ ಭವಾನಿ ಮಾತೆ ಆಶೀರ್ವಾದ ಹಾಗೂ ನಿಮ್ಮೆಲ್ಲರ ಹಾರೈಕೆಯಿಂದ ಶೀಘ್ರ ಗುಣಮುಖನಾಗಿ ಬಂದು ಸದಾ ನಿಮ್ಮ ಸೇವೆಗೆ ಸಿದ್ದ ಇರುತ್ತಾನೆ ಎಂದು ಬಂಡೆಪ್ಪ ಖಾಶೆಂಪುರ ತಿಳಿಸಿದ್ಧಾರೆ.

Key words: Corona Positive – JDS MLA- Bandeppa Khasempura