ಯುಕೆ ಯಿಂದ ಬಂದ 26 ಮಂದಿಗೆ ಕೊರೋನಾ ಪಾಸಿಟಿವ್: ಇಂದು ಶಾಲೆ ಆರಂಭ ಬಗ್ಗೆ ಸಭೆ- ಸಚಿವ ಸುಧಾಕರ್…

ಬೆಂಗಳೂರು,ಡಿಸೆಂಬರ್,28,2020(www.justkannada.in): ಯುಕೆ ಯಿಂದ ಬಂದಿರುವ 26 ಮಂದಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.Teachers,solve,problems,Government,bound,Minister,R.Ashok

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ಕೊರೋನಾ ಪಾಸಿಟಿವ್ ಬಂದಿರುವವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯ ಉತ್ತಮವಾಗಿದೆ. ಎಲ್ಲರಲ್ಲೂ ಕೊರೋನಾ ಗುಣಲಕ್ಷಣಗಳು ಕಂಡು ಬಂದಿದೆ. ಯುಕೆಯಿಂದ ಬಂದವರು ಸಹಕರಿಸಬೇಕು.  ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.corona-positive-26-people-uk-meeting-school-today-minister-sudhakar

ಶಾಲೆ ಆರಂಭ ಕುರಿತು ಇಂದು ಸಭೆ ಮಾಡುತ್ತೇವೆ. ಹೊಸ ವರ್ಷಕ್ಕೆ ಮಾರ್ಗಸೂಚಿ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Corona positive – 26 people –UK-Meeting -school today- Minister -Sudhakar.