Saturday, September 12, 2026

BDA Apartments

ಖ್ಯಾತ ನಟಿ ಸಮೀರಾ ರೆಡ್ಡಿಗೆ ಕೊರೊನಾ ಸೋಂಕು BDA JK_Adv BDA Adv
Home Cinema ಖ್ಯಾತ ನಟಿ ಸಮೀರಾ ರೆಡ್ಡಿಗೆ ಕೊರೊನಾ ಸೋಂಕು

ಖ್ಯಾತ ನಟಿ ಸಮೀರಾ ರೆಡ್ಡಿಗೆ ಕೊರೊನಾ ಸೋಂಕು

ಬೆಂಗಳೂರು, ಏಪ್ರಿಲ್ 19, 2021 (www.justkannada.in):

ಖ್ಯಾತ ನಟಿ ಸಮೀರಾ ರೆಡ್ಡಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ತಾನು ಮನೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದು, ಆರೋಗ್ಯವಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ತಾನು ಕೊರೊನಾ ಸೋಂಕಿಗೆ ಒಳಗಾಗಿರುವುದಾಗಿ ಟ್ವಿಟ್ಟರ್’ನಲ್ಲಿ ಬರೆದುಕೊಂಡಿರುವ ಸಮೀರಾ, ಸದ್ಯ ನಾನು ಆರೋಗ್ಯವಾಗಿದ್ದೇನೆ. ಮುನ್ನೆಚ್ಚರಿಕಾ ಕ್ರಮವಾಗಿ ಹೋಂ ಕ್ವಾರಂಟೈನ್ ನಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಸಮೀರಾ ಸಾಕಷ್ಟು ಸಕ್ರಿಯರಾಗಿದ್ದಾರೆ. ತಮ್ಮ ಕುಟುಂಬ, ಮಕ್ಕಳ ಕುರಿತು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ.