Monday, September 28, 2026

BDA Apartments

ರಾಜ್ಯ ಸರಕಾರದ ಎಡವಟ್ಟಿನಿಂದ ರಾಮನಗರಕ್ಕೆ ಕಾಲಿಟ್ಟ ಕೊರೊನಾ: ಮಾಜಿ ಸಿಎಂ ಕುಮ...
Home Front Page ರಾಜ್ಯ ಸರಕಾರದ ಎಡವಟ್ಟಿನಿಂದ ರಾಮನಗರಕ್ಕೆ ಕಾಲಿಟ್ಟ ಕೊರೊನಾ: ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

ರಾಜ್ಯ ಸರಕಾರದ ಎಡವಟ್ಟಿನಿಂದ ರಾಮನಗರಕ್ಕೆ ಕಾಲಿಟ್ಟ ಕೊರೊನಾ: ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು, ಏಪ್ರಿಲ್ 24, 2020 (www.justkannada.in): ಪಾದರಾಯನಪುರ ಗಲಭೆಕೋರರ ಪೈಕಿ ಇಬ್ಬರಿಗೆ ಕೊರೋನಾ ವೈರಸ್ ತಗುಲಿದ್ದು ಅವರ ಬಗ್ಗೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ತಕ್ಷಣವೇ ಸ್ಥಳಾಂತರಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೊರೋನಾ ಸೋಂಕಿಗೆ 445 ಮಂದಿ ತುತ್ತಾಗಿದ್ದು 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಂಟು ಜಿಲ್ಲೆಗಳು ಮಾತ್ರ ಕೊರೋನಾ ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು. ಇದೀಗ ಸರ್ಕಾರ ತೆಗೆದುಕೊಂಡ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ.

ಹೀಗಾಗಿ ಸರ್ಕಾರ ಸಕಲ ಮುನ್ನೆಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ರಾಮನಗರ ಕಾರಾಗೃಹವನ್ನು ಸಂಪೂರ್ಣ ಕ್ವಾರಂಟೈನ್ ಮಾಡಬೇಕು. ಪೊಲೀಸರು ಸೇರಿದಂತೆ ಜೈಲಿನಲ್ಲಿ ಕಾರ್ಯನಿರ್ವಹಿಸಿದ ಅಡುಗೆ ಮತ್ತು ಸ್ವಚ್ಛತೆ ಸಿಬ್ಬಂದಿಗಳ ಆರೋಗ್ಯ ಕಾಪಾಡಲು ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು ಎಂದು ಒತ್ತಾಯಿಸಿದ್ದಾರೆ.