Monday, September 14, 2026

BDA Apartments

ಕೊರೊನಾ ಎಫೆಕ್ಟ್: ಬಿಸಿಸಿಐ ಮುಂಬೈ ಕೇಂದ್ರ ಕಚೇರಿಗೆ ಬೀಗ ! BDA JK_Adv BDA Adv
Home Front Page ಕೊರೊನಾ ಎಫೆಕ್ಟ್: ಬಿಸಿಸಿಐ ಮುಂಬೈ ಕೇಂದ್ರ ಕಚೇರಿಗೆ ಬೀಗ !

ಕೊರೊನಾ ಎಫೆಕ್ಟ್: ಬಿಸಿಸಿಐ ಮುಂಬೈ ಕೇಂದ್ರ ಕಚೇರಿಗೆ ಬೀಗ !

ಮುಂಬೈ​, ಮಾರ್ಚ್ 17, 2020 (www.justkannada.in): ಬಿಸಿಸಿಐ ಮುಂಬೈನಲ್ಲಿರುವ ತನ್ನ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ.

ಕೋವಿಡ್‌-19 ಭೀತಿಯಿಂದಾಗಿ ಐಪಿಎಲ್‌ ಹಾಗೂ ಇತರೆ ದೇಶಿ ಕ್ರಿಕೆಟ್ ಟೂರ್ನಿಗಳನ್ನು ಈಗಾಗಲೇ ಮುಂದೂಡಿರುವ ಬಿಸಿಸಿಐ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ.

ಇಂದಿನಿಂದಲೇ ಬಿಸಿಸಿಐ ಕಚೇರಿಗೆ ಬೀಗ ಹಾಕಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಹೊಸ ಸೂಚನೆ ಬರುವವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.

ಕೋವಿಡ್‌-19 ಕಾರಣದಿಂದಾಗಿ ಮುಂಬೈನ್ ವಾಂಖೆಡೆ ಮೈದಾನದಲ್ಲಿ ಇರುವ ಬಿಸಿಸಿಐ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗೆ ನೋಟಿಸ್‌ ನೀಡಲಾಗಿದೆ. ಎಲ್ಲರು ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.