Monday, September 14, 2026

BDA Apartments

ಕೊಲ್ಕತ್ತಾದಲ್ಲಿನ ಪಂದ್ಯ ರದ್ದು, ಬಿಸಿಸಿಐ, ಗಂಗೂಲಿ ವಿರುದ್ಧ ಮಮತಾ ಆಕ್ರೋಶ BD...
Home Front Page ಕೊಲ್ಕತ್ತಾದಲ್ಲಿನ ಪಂದ್ಯ ರದ್ದು, ಬಿಸಿಸಿಐ, ಗಂಗೂಲಿ ವಿರುದ್ಧ ಮಮತಾ ಆಕ್ರೋಶ

ಕೊಲ್ಕತ್ತಾದಲ್ಲಿನ ಪಂದ್ಯ ರದ್ದು, ಬಿಸಿಸಿಐ, ಗಂಗೂಲಿ ವಿರುದ್ಧ ಮಮತಾ ಆಕ್ರೋಶ

ಕೊಲ್ಕತ್ತಾ, ಮಾರ್ಚ್ 17, 2020 (www.justkannada.in):  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಸಿಸಿಐ ಹಾಗೂ ಅಧ್ಯಕ್ಷ ಗಂಗೂಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಆಡಬೇಕಿದ್ದ ಏಕದಿನ ಪಂದ್ಯವನ್ನು ಸರ್ಕಾರದ ಗಮನಕ್ಕೆ ತರದೆ ರದ್ದು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತ ಪಂದ್ಯದ ರದ್ದು ಸಂಬಂಧ ಮಾತನಾಡಿರುವ ಮಮತಾ, ‘ಸರ್ಕಾರದೊಂದಿಗೆ ಗಂಗೂಲಿ ಅವರಿಗೆ ಉತ್ತಮ ಸಂಬಂಧವಿದೆ. ಆದರೂ, ಅವರು ನಮಗೆ ಒಂದೇ ಒಂದು ಮಾತು ಹೇಳಿಲ್ಲ. ಕೋಲ್ಕತ್ತದಲ್ಲಿ ಪಂದ್ಯ ಆಯೋಜಿಸಲಾಗಿದೆ ಎಂದ ಮೇಲೆ, ಕೋಲ್ಕತ್ತ ಪೊಲೀಸರಿಗಾದರೂ ಈ ಬಗ್ಗೆ ಮಾಹಿತಿ ನೀಡಬೇಕಿತ್ತು ಎಂದಿದ್ದಾರೆ.