Sunday, August 23, 2026

BDA Apartments

Home Front Page ಕೊರೊನಾ ಪ್ರಕರಣ: ಮಹಾರಾಷ್ಟ್ರವನ್ನೂ ಹಿಂದಿಕ್ಕಿದ ಕರ್ನಾಟಕ

ಕೊರೊನಾ ಪ್ರಕರಣ: ಮಹಾರಾಷ್ಟ್ರವನ್ನೂ ಹಿಂದಿಕ್ಕಿದ ಕರ್ನಾಟಕ

ಬೆಂಗಳೂರು, ಮೇ 16, 2021 (www.justkannada.in): ದೇಶದಲ್ಲಿ ಅತೀ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿ ಕರ್ನಾಟಕ ಮೊದಲ ಸ್ಥಾನಕ್ಕೇರಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇದೀಗ ಕರ್ನಾಟಕ ಕೊರೊನಾ ಪ್ರಕರಣಗಳಲ್ಲಿ ಮೊದಲ ಸ್ಥಾನಕ್ಕೇರಿದೆ.

ಕರ್ನಾಟಕದಲ್ಲಿ ಸದ್ಯ 6,05,494 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, 21,434 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸದ್ಯ 4,94,032 ಸಕ್ರಿಯ ಪ್ರಕರಣಗಳಿದ್ದು, 80,512 ಜನ ಬಲಿಯಾಗಿದ್ದಾರೆ.

ಟಾಪ್ ಸೋಂಕಿತರ ರಾಜ್ಯಗಳು
ಕರ್ನಾಟಕ -6,05,494
ಮಹಾರಾಷ್ಟ್ರ-4,94,032
ಕೇರಳ- 4,45,334
ರಾಜಸ್ಥಾನ-2,08,688
ತಮಿಳುನಾಡು-2,07,789
ಆಂಧ್ರಪ್ರದೇಶ-2,07,467