ರಾಹುಲ್ ಗಾಂಧಿ ಆಪ್ತ, ರಾಜ್ಯ ಸಭಾ ಸದಸ್ಯ ರಾಜೀವ್ ಸತಾವ್ ಕೊರೊನಾಗೆ ಬಲಿ

ನವದೆಹಲಿ, ಮೇ 16, 2021 (www.justkannada.in): ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ರಾಜೀವ್ ಸತಾವ್ ಅವರು ಕೊರೊನಾಗೆ ಬಲಿಯಾಗಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರಿಗೆ ರಾಜೀವ್​ ಆಪ್ತರಾಗಿದ್ದರು. ಏಪ್ರಿಲ್ 22ರಂದು ಅವರಿಗೆ ಕರೊನಾ ಸೋಂಕು ತಗುಲಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಪ್ರಸ್ತುತ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿದ್ದರು. ಈ ಹಿಂದೆ ಮಹಾರಾಷ್ಟ್ರದ ಹಿಂಗೋಲಿಯಿಂದ 16ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿದ್ದರು.

ರಾಜೀವ್​ ಅವರು ಗುಜರಾತ್ ರಾಜ್ಯದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಶಾಶ್ವತವಾಗಿ ಆಯ್ಕೆಯಾಗಿದ್ದರು.