ಕೊರೊನಾ 3ನೇ ಅಲೆ ಭೀತಿ  ಹಿನ್ನೆಲೆ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್- ಮೈಸೂರು ಎಸ್ಪಿ ಆರ್.ಚೇತನ್.

ಮೈಸೂರು,ಆಗಸ್ಟ್,2,2021(www.justkannada.in): ಕೊರೋನಾ 3ನೇ ಅಲೆ ಭೀತಿ ಎದುರಾಗಿರುವ ಹಿನ್ನೆಲೆ, ಕೇರಳ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಮೈಸೂರು ಎಸ್ಪಿ ಆರ್. ಚೇತನ್, ಕರ್ನಾಟಕ ಪ್ರವೇಶಿಸುವವರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯವಾಗಿದೆ. 72ಗಂಟೆ ಒಳಗಿನ ಆರ್.ಟಿ.ಪಿಸಿಆರ್ ನೆಗೆಟಿವ್ ವರದಿ ಬೇಕೇ ಬೇಕು. ಪ್ರತಿನಿತ್ಯ ಬಾವಲಿ ಚೆಕ್ ಪೋಸ್ಟ್ ನಲ್ಲಿ 50 ಲಾರಿ, 100 ಕಾರು, ಬೈಕ್ ಹಾಗೂ 5 ದಿನಸಿಯನ್ನೊಳಗೊಂಡ ಲಾರಿಗಳು ಸಂಚರಿಸುತ್ತಿವೆ. ಡಿಎಸ್ಪಿ, ಸಬ್ ಇನ್ಸ್ ಪೆಕ್ಟರ್, ಆರೋಗ್ಯ, ಕಂದಾಯ ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ಸಕ್ರಿಯರಾಗಿದ್ದಾರೆ. ಜಿಲ್ಲೆಯಲ್ಲಿ ನೈಟ್ ಬೀಟ್ ಪೊಲೀಸ್ ವ್ಯವಸ್ಥೆ ಚುರುಕಾಗಿದೆ ಎಂದು ತಿಳಿಸಿದರು.

ಕಳ್ಳತನ, ದರೋಡೆ ಪ್ರಕರಣಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಒಂದೂವರೆ ತಿಂಗಳಿಂದ ಹಿರಿಯ ನಾಗರೀಕರಿರುವ ಮನೆಗಳನ್ನು ಗುರುತು ಹಚ್ಚುವ ಕಾರ್ಯ ನಡೆಯುತ್ತಿದೆ. 112ಗೆ ಕರೆ ಮಾಡಿದರೂ ಪೊಲೀಸ್ ಇಲಾಖೆ ಜನರ ರಕ್ಷಣೆಗೆ ಸಿದ್ಧವಿರಲಿದೆ ಎಂದು ಎಸ್ಪಿ ಆರ್. ಚೇತನ್ ತಿಳಿಸಿದರು.

Key words: Corona- 3rd wave – check posts- tight- police –security-Mysore -SP- R. Chetan