ಯಾರ ಕಿವಿಗೆ ಹೂವು ಮುಡಿಸಲು ಹೊರಟಿದ್ದೀರಾ ಪ್ರತಾಪ್ ಸಿಂಹ…? ” ನಿಮ್ಮ ಕೊಡುಗೆ ಶೂನ್ಯ : ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ.

 

ಮೈಸೂರು, ಆ.02, 2021 : (www.justkannada.in news ) ಮೇಕೆದಾಟು ಯೋಜನೆಯನ್ನು ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಕಳೆದ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿದ್ದರು. 12 ಸಾವಿರ ಎಕರೆ ಜಾಗದಲ್ಲಿ ಮೇಕೆದಾಟು ಯೋಜನೆ ನಿರ್ಮಾಣ ಆಗಲಿದೆ. ಮೇಕೆದಾಟು ಯೋಜನೆಯಿಂದ ನಮ್ಮ ರಾಜ್ಯದಲ್ಲಿ ಕುಡಿಯುವ ನೀರಿಗೆ ಮಾತ್ರ ಪ್ರಯೋಜನ ಆಗಲಿದೆ. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊಡುಗೆಯಾಗಿದೆ.

ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ತುರ್ತು ಸುದ್ದಿಗೋಷ್ಟಿಯಲ್ಲಿ ಹೇಳಿದಿಷ್ಟು..

ಸಂಸದ ಪ್ರತಾಪ್ ಸಿಂಹ ಡಿಪಿಆರ್ ಮಾಡಿಸಿದ್ದು ನಾವೇ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ಕೊಡುಗೆ ಇಲ್ಲವೇ.‌? ನಿಮ್ಮ ಕೊಡುಗೆ ಇರುವುದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ. ನಿಮ್ಮ ಹೇಳಿಕೆ ಸುಳ್ಳು ಎಂದು ಸಾಬೀತಾದರೆ ಇನ್ನು ಮುಂದೆ ನಿಮ್ಮನ್ನು ಸುಳ್ಳುಗಾರ ಎಂದೇ ಕರೆಯುತ್ತೇನೆ. ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇವರಿಗೆ ರಾಜ್ಯದ ಬಗ್ಗೆ ಕಿಂಚಿತ್ ಕಾಳಜಿಯಿಲ್ಲ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ.

ಅಣ್ಣಾಮೈಲೈ ಅನ್ನೋ ಐಪಿಎಸ್ ಅಧಿಕಾರಿ ಸಿ.ಟಿ.ರವಿ ಶಿಷ್ಯ.!

KPCC spokesperson -M. Laxman - fierce –opposition- Helipad-mysore

ಅವನನ್ನ ಐಪಿಎಸ್ ಹುದ್ದೆಗೆ ರಾಜಿನಾಮೆ ಕೊಡ್ಸಿದ್ರಿ. ಅವನನ್ನ ತಮಿಳುನಾಡು ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಿದ್ರಿ. ಈಗ ನೀವೆ ಮೇಕೆದಾಟು ವಿಚಾರವಾಗಿ ಪ್ರತಿಭಟನೆ ಮಾಡಿಸ್ತಿದ್ದೀರಿ. ಇಲ್ಲಿ ಚಿಕ್ಕಮಗಳೂರಿನಲ್ಲಿ ಸಿಂಗಂ ಅಂತ ಬಿಂಬಿಸಿಕೊಳ್ತಿದ್ದ. ಆದರೆ ಈಗ ತಮಿಳುನಾಡಿನಲ್ಲಿ ಅದೇ ಸಿಂಗಂನ ನಾಲ್ಕನೇ ಸ್ಥಾನಕ್ಕೆ ಕಳ್ಸಿದ್ದಾರೆ. ಮೇಕೆದಾಟು ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವಿಚಾರದಲ್ಲೂ ಸಂಸದ ಪ್ರತಾಪ್‌ ಸಿಂಹ ಸುಳ್ಳು ಹೇಳುತ್ತಿದ್ದಾರೆ. ಈ ಕಾಮಗಾರಿಯಲ್ಲಿ ಸಚಿವ ಡಾ ಹೆಚ್ ಸಿ ಮಹಾದೇವಪ್ಪನವರ ಪಾತ್ರವಿದೆ. ಮಹಾದೇವಪ್ಪ ಅವರ ಪಾತ್ರ ಇಲ್ಲದಿದ್ದರೆ ನಾನು ಪ್ರತಾಪ್ ಸಿಂಹಗೆ ಶರಣಾಗುತ್ತೇನೆ. ಸ್ಮಾರ್ಟ್ ಸಿಟಿ ಯೋಜನೆ ವಿಚಾರದಲ್ಲೂ ಪ್ರತಾಪ್ ಸಿಂಹ ಸುಳ್ಳು ಹೇಳಿಕೊಂಡು ತಿರುಗಾಡ್ತಿದಾರೆ. ಯಾರ ಕಿವಿಗೆ ಹೂವು ಮುಡಿಸಲು ಹೊರಟಿದ್ದೀರಾ ಪ್ರತಾಪ್ ಸಿಂಹ. ನಿಮ್ಮ ಕೊಡುಗೆ ಶೂನ್ಯವಾಗಿದೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ.

 

key words : mysore-congress-m.lakshman-mo-prathap-.simha-telling-lie