Wednesday, August 5, 2026

BDA Apartments

Home Front Page ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ, ಇದು ಅಲ್ಲಿನ ಜನರ ಗೆಲುವು: ಡಿಕೆಶಿ

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ, ಇದು ಅಲ್ಲಿನ ಜನರ ಗೆಲುವು: ಡಿಕೆಶಿ

ಬೆಂಗಳೂರು, ಡಿಸೆಂಬರ್ 03, 2023 (www.justkannada.in): ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇದು ನಮ್ಮ ಗೆಲುವಲ್ಲ, ತೆಲಂಗಾಣದ ಜನತೆಯ ಗೆಲುವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಮ್ಮ ಶಾಸಕರಿಗೆ ಯಾವುದೇ ತೊಂದರೆ ಇಲ್ಲ. ಅನೇಕ ರಾಜ್ಯಗಳಿಂದ ನಾಯಕರು ಬಂದು ನಮ್ಮ ಶಾಸಕರನ್ನು ಕರೆದುಕೊಂಡು ಬರುವ ಕೆಲಸ ಮಾಡಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ.

ತೆಲಂಗಾಣ ಜನರು ಪ್ರತ್ಯೇಕ ರಾಜ್ಯ ಕೊಟ್ಟಿದ್ದಕ್ಕೆ ಗೆಲ್ಲಿಸಿದ್ದಾರೆ. ಸೋನಿಯಾ ಗಾಂಧಿಯವರಿಗೆ ಕೃತಜ್ಞತೆಯಾಗಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಇದು ತೆಲಂಗಾಣದ ಜನತೆಯ ಗೆಲುವು ಎಂದು ಹೇಳಿದ್ದಾರೆ.